ಪತ್ನಿ ಬಿಜೆಪಿಗೆ, ತಂದೆ, ಸಹೋದರಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ತನ್ನ ನಿಲುವು ಬಹಿರಂಗಪಡಿಸಿದ ಕ್ರಿಕೆಟಿಗ ಜಡೇಜಾ

Update: 2019-04-16 08:13 GMT

ಹೊಸದಿಲ್ಲಿ, ಎ.16: ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾ ಸೋಳಂಕಿ ಕಳೆದ ತಿಂಗಳು ಬಿಜೆಪಿ ಸೇರಿದ್ದರೆ ಅವರ ತಂದೆ ಅನಿರುದ್ಧ್ ಸಿಂಗ್ ಹಾಗೂ ಸೋದರಿ ನೈನಬಾ ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಹಾಗಾದರೆ ರವೀಂದ್ರ ಜಡೇಜಾ ಯಾವ ಪಕ್ಷವನ್ನು ಬೆಂಬಲಿಸಲಿದ್ದಾರೆಂಬ ಕುತೂಹಲ ಎಲ್ಲಡೆ ಇರುವಂತೆಯೇ ತಾವು ತಮ್ಮ ಪತ್ನಿ ಸೇರಿರುವ ಬಿಜೆಪಿಯನ್ನೇ ಬೆಂಬಲಿಸುವುದಾಗಿ ಅವರು ಸ್ಪಷ್ಟ ಪಡಿಸಿದ್ದಾರೆ.

ತಮ್ಮ ತಂದೆ ಹಾಗೂ ಸೋದರಿ ಕಾಂಗ್ರೆಸ್ ಪಕ್ಷ ಸೇರಿದ ಬೆನ್ನಲ್ಲೇ, ಎಲ್ಲರ ಮನಸ್ಸಿನಲ್ಲಿರುವ ಗೊಂದಲ ನಿವಾರಿಸುವ ಸಲುವಾಗಿ ಟ್ವೀಟ್ ಮಾಡಿದ ಜಡೇಜಾ ತಾವು ಬಿಜೆಪಿ ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ.

ಜಡೇಜಾ ಅವರ ಪತ್ನಿ ರಿವಾ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಗುಜರಾತ್ ನಲ್ಲಿ ಕರ್ನಿ ಸೇನಾದ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನೇಮಿಸಲ್ಪಟ್ಟಿದ್ದರು. ಆಗ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರೂ ಲೋಕಸಭಾ ಚುನಾವಣೆ ಘೋಷಣೆಯಾಗುವುದಕ್ಕಿಂತ ಮುನ್ನ ಬಿಜೆಪಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News