ಮೋದಿಯನ್ನು ಟೀಕಿಸುವ ಬುಕ್‌ಲೆಟ್: ಪ್ರಕಾಶಕರ ವಿರುದ್ಧ ಎಫ್‌ಐಆರ್ ದಾಖಲು

Update: 2019-04-17 18:36 GMT

ಅಹ್ಮದಾಬಾದ್, ಎ. 17: ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಭರವಸೆಗಳು ಹಾಗೂ ನೀತಿಗಳ ಬಗ್ಗೆ ಟೀಕಿಸುವ ಕೈಪಿಡಿ ‘ಚೌಕಿದಾರ್ ಪೇ ಚರ್ಚಾ’ ಪ್ರಕಾಶಕರ ವಿರುದ್ಧ ಅಹ್ಮದಾಬಾದ್‌ನಲ್ಲಿ ಪೊಲೀಸ್ ದೂರು ದಾಖಲಾಗಿದೆ.

ಈ ಕೈಪಿಡಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ತಿಳಿದ ಬಳಿಕ ಜಿಲ್ಲಾ ಚುನಾವಣಾ ಆಯುಕ್ತರ ನಿರ್ದೇಶನದಂತೆ ಕೈಪಿಡಿಯ ಪ್ರಕಾಶಕ ಜಯೇಶ್ ಶಾಹ್ ವಿರುದ್ಧ ದೂರು ದಾಖಲಿಸಲಾಗಿದೆ.

ನಗದು ನಿಷೇಧ, ಜಿಎಸ್‌ಟಿ, ರಫೇಲ್ ಒಪ್ಪಂದ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಳ್ಳುವ 60 ವ್ಯಂಗ್ಯಚಿತ್ರಗಳನ್ನು ಒಳಗೊಂಡ ಕೈಪಿಡಿಯ ಕುರಿತು ಜಿಲ್ಲಾ ಚುನಾವಣಾ ಅಧಿಕಾರಿ ಎ. 4ರಂದು ದೂರು ಸ್ವೀಕರಿಸಿದ್ದರು.

ಈ ಕೈಪಿಡಿ ಕುರಿತು ಚುನಾವಣಾ ಅಧಿಕಾರಿ ತನಿಖೆ ನಡೆಸಲಿದ್ದಾರೆ. ಮಾದರಿ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಕಾರಣಕ್ಕೆ ‘ಚೌಕಿದಾರ್ ಪೇ ಚರ್ಚಾ’ ಕೈಪಿಡಿ ಪ್ರಕಾಶಕರ ವಿರುದ್ಧ ಎಫ್‌ಐಆರ್ ದಾಖಲಿಸಲು ನಾವು ಪಾಲ್ಡಿ ಪೊಲೀಸ್ ಇನ್ಸ್‌ಪೆಕ್ಟರ್ ಅವರಲ್ಲಿ ದೂರು ಸಲ್ಲಿಸಿದ್ದೇವೆ.’’ ಎಂದು ಶಕ್ರಭಾ ದೇಸಾಯಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News