2 ಗಂಟೆಗಳಲ್ಲಿ ರಾಜ್ಯದಲ್ಲಿ ಶೇ 1.14ರಷ್ಟು ಮತದಾನ

Update: 2019-04-18 05:46 GMT

ಬೆಂಗಳೂರು, ಎ.18: ಕರ್ನಾಟಕದಲ್ಲಿ ಲೋಕಸಭೆಯ ಮೊದಲ ಹಂತದ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ  ಬೆಳಗ್ಗೆ 7ಗಂಟೆಯಿಂದ 9 ಗಂಟೆಯ  ತನಕ  ಶೇ 1.14ರಷ್ಟು  ಮತದಾನವಾಗಿದೆ.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರು ದಕ್ಷಿಣ ಕ್ಷೇತ್ರದ ಜಯನಗರದ ಮತಗಟ್ಟೆ 54ರಲ್ಲಿ ಮತ ಚಲಾಯಿಸಿದರು.

ಮಾಜಿ ಮುಖ್ಯ ಸಿದ್ದರಾಮಯ್ಯ ಅವರು ಪುತ್ರ ಯತೀಂದ್ರ ಜೊತೆ ಸಿದ್ದರಾಮನಹುಂಡಿ ಮತಗಟ್ಟೆ 86ರಲ್ಲಿ ಮತಚಲಾಯಿಸಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಲಿಂಬಾವಳಿ ,ಪತ್ನಿ ಮಂಜುಳಾ ಲಿಂಬಾವಳಿ ಜೊತೆ ನ್ಯೂ ತಿಪ್ಪ ಸಂದ್ರ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ   ಸಂಸದ ಡಾ. ವೀರಪ್ಪ ಮೊಯ್ಲಿ, ಪತ್ನಿ ಮಾಲತಿ , ಪುತ್ರ ಹರ್ಷ ಮತ್ತು ಪುತ್ರಿ ಹಂಸ ಮತಗಟ್ಟೆ ಸಂಖ್ಯೆ 162ರಲ್ಲಿ ಮತ ಚಲಾಯಿಸಿದರು. ಅದೇ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಹೊಸಕೋಟೆಯಲ್ಲಿ ಪತ್ನಿಯ ಜೊತೆ ಮತ ಚಲಾಯಿಸಿದರು.

ಹಾಸನದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಪತ್ನಿ ತಾರಾ ಜೊತೆ ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಬನಶಂಕರಿ ಕೀಮ್ಸ್ ಕಾಲೇಜಿನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಅದೇ ಮತಗಟ್ಟೆಯಲ್ಲಿ ನಟಿ ಪ್ರಣೀತಾ ಸುಭಾಷ್ ಮತ ಚಲಾಯಿಸಿದರು.

ಚಿಂತಾಮಣಿಯ ವೀರಪಲ್ಲಿಯಲ್ಲಿ 105 ವಯಸ್ಸಿನ ನರಸಿಂಹ ನಾಯ್ಡು ಮತ್ತು 96ರ ಹರೆಯದ ಅವರ ಪತ್ನಿನರಸಮ್ಮ  ಮತಚಲಾವಣೆ ಮಾಡಿದರು.

ಮಂಡ್ಯದ ಮಳವಳ್ಳಿಯ ಚಿಕ್ಕಮುಲಗೂಡಿನಲ್ಲಿ ಅಯ್ಯಪ್ಪ ಮಾಲಾಧಾರಿಗಳು ಭಜನೆ ಮಾಡುತ್ತಲೇ ಮತಗಟ್ಟೆಗೆ ಆಗಮಿಸಿ ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News