11 ಗಂಟೆಯ ಹೊತ್ತಿಗೆ ಶೇ 10.85ರಷ್ಟು ಮತದಾನ

Update: 2019-04-18 06:51 GMT

ಹೊಸದಿಲ್ಲಿ, ಎ.18: ದೇಶದಲ್ಲಿ ಹನ್ನೊಂದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ ಲೋಕಸಭೆಯ 95 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯ ಮತದಾನ ಶಾಂತಿಯುತವಾಗಿದ್ದು, ಬೆಳಗ್ಗೆ 11 ಗಂಟೆಯ ಹೊತ್ತಿಗೆ ಶೇ 10.85ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕರ್ನಾಟಕದಲ್ಲಿ ಶೇ 11.01ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಅಸ್ಸಾಂನಲ್ಲಿ ಕಳೆದ 4 ಗಂಟೆಗಳಲ್ಲಿ ಗರಿಷ್ಠ ಶೇ  18.23 ಮತದಾನ ದಾಖಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News