ವಿಶ್ವಕಪ್ ತಂಡದಿಂದ ರಿಷಭ್ ಪಂತ್ ಕೈಬಿಟ್ಟಿದ್ದಕ್ಕೆ ರಿಕಿ ಪಾಂಟಿಂಗ್‌ಗೆ ಅಚ್ಚರಿ

Update: 2019-04-19 04:13 GMT

ಹೊಸದಿಲ್ಲಿ, ಎ.18: ಭಾರತದ ವಿಶ್ವಕಪ್ ತಂಡದಿಂದ ರಿಷಭ್ ಪಂತ್‌ರನ್ನು ಹೊರಗಿಟ್ಟಿರುವುದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹಾಗೂ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಚ್ಚರಿ ವ್ಯಕ್ತಪಡಿಸಿದರು. ಸ್ಫೋಟಕ ಬ್ಯಾಟ್ಸ್‌ಮನ್- ವಿಕೆಟ್‌ಕೀಪರ್  ಪಂತ್ ಭಾರತದ ಪ್ರಮುಖ ಸದಸ್ಯನಾಗಿದ್ದಾರೆ ಎಂದಿದ್ದಾರೆ. ‘‘ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿರುವ ಭಾರತೀಯ ಕ್ರಿಕೆಟ್ ತಂಡದಿಂದ ಪಂತ್‌ರನ್ನು ಕೈಬಿಟ್ಟಿರುವ ವಿಚಾರ ಕೇಳಿ ನನಗೆ ತುಂಬಾ ಅಚ್ಚರಿಯಾಯಿತು. ಆತನಿಗೆ ತಂಡದಲ್ಲಿ ಸ್ಥಾನ ನೀಡಬೇಕಾಗಿತ್ತು. 11ರ ಬಳಗದಲ್ಲೂ ಅವಕಾಶ ಪಡೆಯುವ ಸಮರ್ಥ ಆಟಗಾರನಾಗಿದ್ದಾರೆ. ನಾಲ್ಕನೇ ಅಥವಾ ಐದನೇ ಕ್ರಮಾಂಕದ ಆಟಗಾರನಾಗಿ ಭಾರತ ಹಾಗೂ ಇತರ ತಂಡಗಳ ಮಧ್ಯೆ ವ್ಯತ್ಯಾಸ ಉಂಟು ಮಾಡಬಲ್ಲ’’ ಎಂದು  ಪಾಂಟಿಂಗ್ ಹೇಳಿದ್ದಾರೆ.

‘‘ಭಾರತದ ವಿಶ್ವಕಪ್ ತಂಡ ಪ್ರಕಟವಾದ ತಕ್ಷಣ ನಾನು ಪಂತ್ ಬಳಿ ಮಾತನಾಡಿದ್ದೆ. ಅವರು ಆಯ್ಕೆ ಸಮಿತಿಯ ನಿರ್ಧಾರವನ್ನು ಧನಾತ್ಮಕವಾಗಿ ತೆಗೆದುಕೊಂಡರು. ಆತನಿಗೆ ನಿರಾಶೆಯಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆತ ತಂಡದಲ್ಲಿರಲು ಬಯಸಿದ್ದ. ಮುಂದಿನ ದಿನಗಳಲ್ಲಿ ಮೂರು ಅಥವಾ ನಾಲ್ಕು ವಿಶ್ವಕಪ್‌ಗಳಲ್ಲಿ ಆಡುವ ಸಾಮರ್ಥ್ಯ ಆತನಲ್ಲಿದೆ’’
ಎಂದು ಆಸ್ಟ್ರೇಲಿಯದ ದಂತಕತೆ ಪಾಂಟಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News