ಎಲ್ಲ ಕಳ್ಳರ ಉಪನಾಮ ಮೋದಿ: ರಾಹುಲ್ ವಿರುದ್ಧ ಲಲಿತ್ ಮೋದಿ ಮೊಕದ್ದಮೆ

Update: 2019-04-19 05:19 GMT

ಹೊಸದಿಲ್ಲಿ, ಎ.19: ರಾಹುಲ್ ಗಾಂಧಿ ಇತ್ತೀಚೆಗೆ ನಡೆದ ಚುನಾವಣಾ ರ್ಯಾಲಿಯಲ್ಲಿ ‘‘ಎಲ್ಲ ಕಳ್ಳರ ಉಪ ನಾಮ ಮೋದಿ’’ಎಂದು ಹೇಳಿಕೆ ನೀಡಿದ್ದರು. ಇದರಿಂದ ಕೆರಳಿರುವ ಐಪಿಎಲ್‌ನ ಮಾಜಿ ಮುಖ್ಯಸ್ಥ ಹಾಗೂ ಕಳಂಕಿತ ಆಡಳಿತಾಧಿಕಾರಿ ಲಲಿತ್ ಮೋದಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ವಿರುದ್ಧ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ.

‘‘ಎಲ್ಲ ಮೋದಿಗಳು ಕಳ್ಳರು ಎಂದು ರಾಹುಲ್ ಗಾಂಧಿ ಹೇಳುತ್ತಾರೆ, ನಾನು ಅವರ ವಿರುದ್ಧ ಲಂಡನ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುತ್ತೇನೆ. 5 ದಶಕಗಳ ಕಾಲ ಭಾರತವನ್ನು ಹಗಲು ರಾತ್ರಿ ಲೂಟಿ ಮಾಡಿದವರು ಯಾರೆಂದು ಇಡೀ ವಿಶ್ವಕ್ಕೆ ಗೊತ್ತಿದೆ’’ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.

‘‘ ನೀರವ್ ಮೋದಿ, ಲಲಿತ್ ಮೋದಿ ಹಾಗೂ ನರೇಂದ್ರ ಮೋದಿ ಆಗಿರಬಹುದು, ಎಲ್ಲ ಕಳ್ಳರ ಉಪನಾಮ ಮೋದಿ ಆಗಿದ್ದು ಹೇಗೆ?ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಇನ್ನೆಷ್ಟು ಮೋದಿಗಳ ಹೆಸರು ಹೊರಬರಲು ಬಾಕಿಯಿದೆಯೋ ಗೊತ್ತಿಲ್ಲ? ಎಂದು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಹೇಳಿದ್ದರು. ಈ ಹೇಳಿಕೆಯ ಮೂಲಕ ಪ್ರಧಾನಿ ಮೋದಿ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.

ರಾಹುಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷರಿಗೆ ಇಂತಹ ಭಾಷೆ ಒಪ್ಪುವುದಿಲ್ಲ. ಛತ್ತೀಸ್‌ಗಡದ ಸಾಹು ಸಮುದಾಯವನ್ನು ಗುಜರಾತ್‌ನಲ್ಲಿ ಮೋದಿ ಎಂದು ಕರೆಯುತ್ತಾರೆ. ಇದೀಗ ಅವರೆಲ್ಲರೂ ಕಳ್ಳರೇ? ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News