ಹನೂರು: ಗಾಳಿ ಮಳೆಗೆ ಮನೆ ಗೋಡೆ ಕುಸಿತ

Update: 2019-04-19 12:33 GMT

ಹನೂರು,ಎ.19: ತಾಲೂಕಿನ ವಿವಿಧೆಡೆ ಸುರಿದ ಗಾಳಿ ಸಹಿತ ಧಾರಕಾರ ಮಳೆಗೆ ಹೂಗ್ಯಂನ ಯರಂಬಾಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದೆ.

ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ತಡರಾತ್ರಿ ನಿರಂತರವಾಗಿ ಸುರಿದ ಗಾಳಿ ಮಳೆಯ ಆರ್ಭಟಕ್ಕೆ ಗಡಿ ಹಂಚಿನ ಹೂಗ್ಯಂ ಗ್ರಾಪಂಗೆ ಸೇರಿದ ಯರಂಬಾಡಿ ಹಳ್ಳಿಯಲ್ಲಿ ನಾಗರಾಜು ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು, ಮನೆಯ ಮೇಲ್ಚಾವಣಿ ಶೆಡ್‍ಗಳು ಸಹ ಗಾಳಿಗೆ ತೂರಿ ಹೋಗಿವೆ. ಮನೆ ಒಳಗಿದ್ದ ಧವಸ ಧಾನ್ಯಗಳು ನಾಶವಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News