ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-04-19 18:33 GMT

ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ಮಾಸ್ಟರ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ಇನ್ ಮೆಡಿಕಲ್ ಫಿಸಿಕ್ಸ್ ಫೆಲೊಶಿಪ್ಸ್ 2020-21

ವಿವರ: ಭೌತವಿಜ್ಞಾನ ಪದವೀಧರರಿಗೆ ಇಟಲಿಯಲ್ಲಿ ವೈದ್ಯಕೀಯ ಭೌತವಿಜ್ಞಾನಿಗಳಾಗಿ ತರಬೇತಿ ಪಡೆಯಲು ಹಾಗೂ ವೈದ್ಯಕೀಯ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲು ಪೂರ್ಣ ಅಥವಾ ಆಂಶಿಕ ಸ್ಕಾಲರ್‌ಶಿಪ್ ಅನ್ನು ಅಬ್ದುಸ್ಸಲಾಮ್ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಥಿಯೊರೆಟಿಕಲ್ ಫಿಸಿಕ್ಸ್ (ಐಸಿಟಿಪಿ) ಮತ್ತು ಟ್ರಯೆಸ್ಟ್ ವಿವಿ ನೀಡುತ್ತಿದೆ.
ಅರ್ಹತೆ: ಭೌತವಿಜ್ಞಾನ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪಡೆದಿರುವ 30 ವರ್ಷದೊಳಗಿನ ಭಾರತೀಯರು ಅರ್ಜಿ ಸಲ್ಲಿಸಬಹುದು(ಭಾರತದಲ್ಲಿರುವ ಇಟಲಿ ರಾಯಭಾರಿ ಕಚೇರಿಯಿಂದ ‘ಡಿಕ್ಲರೇಷನ್ ಆಫ್ ವ್ಯಾಲ್ಯೂ’ ಪ್ರಮಾಣಪತ್ರ ಪಡೆಯಬೇಕು).
ನೆರವು: ಪೂರ್ಣ ಫೆಲೋಶಿಪ್ ವಿಭಾಗದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಪೂರ್ಣ ಪ್ರಯಾಣ ಭತ್ತೆ, ನೋಂದಾವಣೆ ಶುಲ್ಕಕ್ಕೆ ನೆರವು ಮತ್ತು ಮಾಸಿಕ 1000 ಯುರೊ ನೀಡಲಾಗುವುದು. ಆಂಶಿಕ ಫೆಲೋಶಿಪ್ ವಿಭಾಗದಡಿ ವಿಮಾನ ಪ್ರಯಾಣ ವೆಚ್ಚ ಹಾಗೂ ನೋಂದಾವಣೆ ಶುಲ್ಕದ ಅರ್ಧ ಮೊತ್ತ, ಮಾಸಿಕ 500 ಯುರೊ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 22, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/MOA2

*******************
ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ಡಿಯುಒ-ಬೆಲ್ಜಿಯಂ/ವಲೋನಿಯಾ-ಬ್ರಸೆಲ್ಸ್ ಸ್ಕಾಲರ್‌ಶಿಪ್ 2019

 ವಿವರ: ಸಿಬ್ಬಂದಿ ವಿನಿಮಯ ಕಾರ್ಯಕ್ರಮದಡಿ ಹೆಚ್ಚಿನ ಅನುಭವ ಪಡೆಯಲು ಅವಕಾಶ ನೀಡುವ ನಿಟ್ಟಿನಲ್ಲಿ ವೈಜ್ಞಾನಿಕ ಸಿಬ್ಬಂದಿ ಹಾಗೂ ಶೈಕ್ಷಣಿಕ ಸದಸ್ಯರಿಗೆ ಎಎಸ್‌ಇಎಂ-ಡಿಯುಒ ಫೆಲೊಶಿಪ್ ನೀಡುವ ಆರ್ಥಿಕ ನೆರವು.
ಅರ್ಹತೆ: ವಲೋನಿಯಾ-ಬ್ರಸೆಲ್ಸ್ ಹೈಯರ್ ಎಜುಕೇಶನ್ ಇನ್‌ಸ್ಟಿಟ್ಯೂಟ್(ಎಚ್‌ಇಐ)ನ ವೈಜ್ಞಾನಿಕ ಸಿಬ್ಬಂದಿ ಅಥವಾ ಏಶ್ಯನ್ ಎಚ್‌ಇಐನ ಸಿಬ್ಬಂದಿ ಗರಿಷ್ಠ 3 ತಿಂಗಳಾವಧಿಯ ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.
 ನೆರವು: 3 ತಿಂಗಳಾವಧಿಗೆ ಗರಿಷ್ಠ 5000 ಯುರೊ ನೀಡುತ್ತಿದ್ದು ಪರಸ್ಪರ ವಿನಿಮಯವಾಗಿರುವ ಸಿಬ್ಬಂದಿಯ ಮಧ್ಯೆ ಸ್ಕಾಲರ್‌ಶಿಪ್ ಮೊತ್ತವನ್ನು ಹಂಚಿಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 24, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/yug/DS33

*************
ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
ಸರ್ ರತನ್ ಟಾಟಾ ಪೋಸ್ಟ್ ಡಾಕ್ಟೋರಲ್ ಫೆಲೊಶಿಪ್ 2019

ವಿವರ: ವೃತ್ತಿಜೀವನದ ಆರಂಭದ ಹಂತದಲ್ಲಿರುವ ಸಂಶೋಧಕರಿಗೆ ಎಲ್‌ಎಸ್‌ಇ ಇಂಡಿಯಾ ಅಬ್ಸರ್ವೇಟರಿಯಲ್ಲಿ 6 ತಿಂಗಳಾವಧಿಯ ಸಂಶೋಧನಾ ಆಧರಿತ ಪ್ರೊಜೆಕ್ಟ್ ಕಾರ್ಯ ನಡೆಸಲು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ಸೈಯನ್ಸ್ ನೀಡುವ ಸ್ಕಾಲರ್‌ಶಿಪ್. ಈ ಫೆಲೊಶಿಪ್ ಕಾರ್ಯಕ್ರಮ ಭಾರತ ಮತ್ತು ದಕ್ಷಿಣ ಏಶ್ಯಾದಲ್ಲಿ ಆರ್ಥಿಕತೆ ಹಾಗೂ ಸಮಾಜವನ್ನು ಕೇಂದ್ರೀಕರಿಸಿದೆ.
ಅರ್ಹತೆ: ಭಾರತ ಅಥವಾ ಸಾರ್ಕ್ ದೇಶಗಳ ಪ್ರಮುಖ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಭಾರತೀಯರು ಅರ್ಜಿ ಸಲ್ಲಿಸಬಹುದು. ಪಿಎಚ್‌ಡಿ ಪದವಿ ಪಡೆದಿದ್ದು, ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಸಂಶೋಧಕರಾಗಿರಬೇಕು.

ನೆರವು: ಮಾಸಿಕ 1750 ಗ್ರೇಟ್‌ಬ್ರಿಟನ್ ಪೌಂಡ್ ನೆರವು, ಎಲ್‌ಎಸ್‌ಇ ಪ್ರಯೋಗಾಲಯ ಸೌಲಭ್ಯ ಪಡೆಯಲು ಅವಕಾಶ ಮತ್ತು ಸಂಶೋಧನಾ ಕಾರ್ಯಕ್ಕೆ ಪ್ರಯಾಣ ಭತ್ತೆ ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 29, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/POD/SRT1

*****************
ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
ಪೋಸ್ಟ್ ಡಾಕ್ಟೋರಲ್ ವಿಸಿಟಿಂಗ್ ಫೆಲೊಶಿಪ್ 2019

ವಿವರ: ಡಾಕ್ಟೋರಲ್ ಅಭ್ಯರ್ಥಿಗಳಿಂದ ‘ಇನ್‌ಸ್ಟಿಟ್ಯೂಟ್ ಆಫ್ ಸ್ಟಡೀಸ್ ಇನ್ ಥಿಯೊರೆಟಿಕಲ್ ಫಿಸಿಕ್ಸ್’ನಲ್ಲಿ ಸಂದರ್ಶಕ ಪೋಸ್ಟ್ ಡಾಕ್ಟೋರಲ್ ಫೆಲೊ ಆಗಲು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್(ಟಿಐಎಫ್‌ಆರ್) ಅರ್ಜಿ ಆಹ್ವಾನಿಸಿದೆ. ಸ್ಕಾಲರ್‌ಶಿಪ್ ಸಹಿತ ಇತರ ಹಲವು ಸೌಲಭ್ಯಗಳು, ಅನುಭವಿ ಅಭ್ಯರ್ಥಿಗಳಿಗೆ ಜವಾಹರಲಾಲ್ ನೆಹರೂ ಪೋಸ್ಟ್ ಡಾಕ್ಟೋರಲ್ ಫೆಲೊಶಿಪ್ ಸೌಲಭ್ಯ ಪಡೆಯಲು ಅವಕಾಶವಿದೆ.
ಅರ್ಹತೆ: ಥಿಯೊರೆಟಿಕಲ್ ಫಿಸಿಕ್ಸ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಅಥವಾ ಪಿಎಚ್‌ಡಿ ಪದವಿ ಪಡೆಯಲು ಪ್ರಬಂಧ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಸೂಕ್ತ ಸ್ಥಿರ ಮಾಸಿಕ ಸ್ಟೈಪೆಂಡ್, ಕ್ಯಾಂಪಸ್‌ನಲ್ಲಿ ವಾಸ್ತವ್ಯಕ್ಕೆ ನೆರವು, ಪೋಸ್ಟ್ ಡಾಕ್ಟೋರಲ್ ಅಧ್ಯಯನದ ಅವಧಿಯಲ್ಲಿ ಕ್ಯಾಂಪಸ್‌ನಲ್ಲಿರುವ ವೈದ್ಯಕೀಯ ಸೌಲಭ್ಯ ಪಡೆಯಲು ಅವಕಾಶ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 30, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/yug/TPD1

******************
ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ಐಎಫ್‌ಎಂಎ ಫೌಂಡೇಶನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2019

ವಿವರ: ಫೆಸಿಲಿಟಿ ಮ್ಯಾನೇಜ್‌ಮೆಂಟ್ ವೃತ್ತಿಪರರಿಗೆ ಮತ್ತು ವ್ಯವಸ್ಥಾಪಕರಿಗೆ ಈ ಸ್ಕಾಲರ್‌ಶಿಪ್ ಪಡೆಯಲು ಮತ್ತು ಉನ್ನತ ಅಧ್ಯಯನ ನಡೆಸಲು ಇಂಟರ್‌ನ್ಯಾಷನಲ್ ಫೆಸಿಲಿಟಿ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (ಐಎಫ್‌ಎಂಎ) ಫೌಂಡೇಶನ್ ವ್ಯವಸ್ಥೆ ಮಾಡಿದೆ.
 ಅರ್ಹತೆ: ಫೆಸಿಲಿಟೀಸ್ ಮ್ಯಾನೇಜ್‌ಮೆಂಟ್ ಅಥವಾ ಸಂಬಂಧಿತ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲು ಅರ್ಜಿ ಸಲ್ಲಿಸಿದ, ಈ ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ ಶೇ.80ರಷ್ಟು ಅಂಕ ಗಳಿಸಿರುವವರು ಅರ್ಜಿ ಸಲ್ಲಿಸಬಹುದು. ಫೆಸಿಲಿಟಿ ಮ್ಯಾನೇಜರ್‌ಗಳಾಗಿ ಕೆಲಸ ಮಾಡುತ್ತಿರುವವರೂ ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 1500 ರಿಂದ 10,000 ಅಮೆರಿಕನ್ ಡಾಲರ್ ಮೊತ್ತದ ಆರ್ಥಿಕ ನೆರವು, ಪ್ರಯಾಣ, ವಾಸ್ತವ್ಯ, ಊಟ ಇತ್ಯಾದಿಗಳಿಗೆ , ಅಮೆರಿಕದ ಅರಿರೆನಾದಲ್ಲಿ ನಡೆಯುವ ಐಎಫ್‌ಎಂಎಯ ವಿಶ್ವ ಕಾರ್ಯಸ್ಥಳ ಸಮ್ಮೇಳನ(ವರ್ಕ್‌ಪ್ಲೇಸ್ ಕಾನ್ಫರೆನ್ಸ್) ಮತ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಆರ್ಥಿಕ ಸಹಾಯ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 30, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/yug/ IFS8

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News