ಬಲಿಪಶುಗಳಿಗೆ ಶ್ರದ್ಧಾಂಜಲಿ: ಲಂಕಾ 3 ನಿಮಿಷ ಮೌನ

Update: 2019-04-23 15:35 GMT

ಕೊಲಂಬೊ, ಎ. 23: ಶ್ರೀಲಂಕಾದಲ್ಲಿ ಈಸ್ಟರ್ ರವಿವಾರದಂದು ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳಲ್ಲಿ ಮೃತಪಟ್ಟ 300ಕ್ಕೂ ಅಧಿಕ ಮಂದಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಮಂಗಳವಾರ ದ್ವೀಪ ರಾಷ್ಟ್ರದಲ್ಲಿ ರಾಷ್ಟ್ರೀಯ ಶೋಕಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ದೇಶ ಮೂರು ನಿಮಿಷಗಳ ಕಾಲ ಮೌನವಾಯಿತು.

ಸರಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜಗಳನ್ನು ಅರ್ಧ ಮಟ್ಟಕ್ಕೆ ಇಳಿಸಲಾಯಿತು ಹಾಗೂ ಜನರು ತಲೆ ಬಗ್ಗಿಸಿದರು.

ಮೌನಾಚರಣೆಯು ಬೆಳಗ್ಗೆ 8:30ಕ್ಕೆ ಆರಂಭಗೊಂಡಿತು. ಇದೇ ಸಮಯದಲ್ಲಿ ರವಿವಾರ ಮೊದಲ ಬಾಂಬ್ ಸಿಡಿದಿತ್ತು.

ಸರಣಿ ಸ್ಫೋಟಗಳ ಬಲಿಪಶುಗಳ ಸ್ಮರಣ ಕಾರ್ಯಕ್ರಮ ಮಂಗಳವಾರ ಮೊದಲ ಬಾರಿಗೆ ವಿವಿಧೆಡೆಗಳಲ್ಲಿ ನಡೆಯಿತು.

ಕೊಲಂಬೊದ ಸೇಂಟ್ ಆ್ಯಂಟನಿ ಚರ್ಚ್‌ನಲ್ಲಿ ಸೇರಿದ ಜನರು ಮೇಣದಬತ್ತಿಗಳನ್ನು ಹಿಡಿದು ಪ್ರಾರ್ಥನೆ ಸಲ್ಲಿಸಿದರು. ಈ ಚರ್ಚ್‌ನಲ್ಲಿ ರವಿವಾರ ನಡೆದ ದಾಳಿಯಲ್ಲಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News