ಸರ್ವರ್ ಡೌನ್; ಏರ್ ಇಂಡಿಯಾ ವಿಮಾನಗಳ ಹಾರಾಟಕ್ಕೆ ಅಡಚಣೆ

Update: 2019-04-27 05:04 GMT

ಹೊಸದಿಲ್ಲಿ, ಎ.27: ಆಂತರಿಕ ಸರ್ವರ್ ಸಮಸ್ಯೆಯಿಂದಾಗಿ ಶನಿವಾರ ಏರ್ ಇಂಡಿಯಾ ವಿಮಾನಗಳ ಸೇವೆಯಲ್ಲಿ ವ್ಯತ್ಯವಾಗಿದ್ದು, ವಿಶ್ವದಾದ್ಯಂತ ಸಹಸ್ರಾರು ಪ್ರಯಾಣಿಕರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.

ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಏರ್ ಇಂಡಿಯಾ ವಿಮಾನಗಳು  ಹಾರಾಟವನ್ನು ಸ್ಥಗಿತಗೊಳಿಸಿದ್ದು, ಸುಮಾರು 6 ಗಂಟೆಗಳ ಕಾಲ ವಿಮಾನಗಳು ಹಾರಾಟ ನಿಲ್ಲಿಸಿತ್ತು. ಬೆಳಗ್ಗೆ 8:45ಕ್ಕೆ ಸಮಸ್ಯೆ ಪರಿಹಾರಗೊಂಡಿದ್ದು, ಶೀಘ್ರದಲ್ಲೇ ವಿಮಾನ ಹಾರಾಟ ಆರಂಭಿಸಲಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.

ಬೆಳಗ್ಗೆ 3:30ಕ್ಕೆ ಏರ್ ಇಂಡಿಯಾದ ಸರ್ವರ್ ಡೌನ್ ಆಗಿದ್ದು, ಇದರಿಂದಾಗಿ ಏರ್ ಇಂಡಿಯಾದ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ವಿಮಾನಗಳ ಹಾರಾಟ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News