ಕೊಪ್ಪ: ಎರಡು ಜೋಡಿಯ ಸರಳ ಸಾಮೂಹಿಕ ವಿವಾಹ

Update: 2019-04-29 12:10 GMT

ಚಿಕ್ಕಮಗಳೂರು,ಎ.29: ಕೊಪ್ಪ ಪಟ್ಟಣದ ಮುಹಿಯುದ್ದೀನ್ ಜುಮಾ ಮಸೀದಿ ಹಾಗು ಸ್ವಲಾತ್ ಸಮಿತಿಯ ಆಶ್ರಯದಲ್ಲಿ ಎರಡು ಜೋಡಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಇಂದು ನಡೆಯಿತು.

ಗುರುವಾಯನಕೆರೆ ಅಸೈಯ್ಯದ್ ಸಾದಾತ್ ತಂಙಳ್ ನಿಖಾಹ್ ನೆರವೇರಿಸಿ ಆಶಿರ್ವಚನಗೈದರು. ಮಸೀದಿ ಖತೀಬ್ ದಾವೂದ್ ಸಅದಿ, ಮಸೀದಿ ಅಧ್ಯಕ್ಷ ಹೆಚ್.ಎಸ್ ಮಯ್ಯದ್ದಿ, ಸ್ವಲಾತ್ ಸಮಿತಿ ಅಧ್ಯಕ್ಷ ಝೈನುದ್ದೀನ್, ಕಾರ್ಯದರ್ಶಿ ಜುಬೇರ್ ಅಹಮದ್, ಸ್ವಲಾತ್ ಸಮಿತಿ ಕಾರ್ಯದರ್ಶಿ ಶೌಕತ್ ಹಾಗು ಮಸೀದಿ ಸಮಿತಿ ಸದಸ್ಯರು ನೇತೃತ್ವ ವಹಿಸಿದ್ದರು.

ಸಮಾಜಮುಖಿ ಆಗಿರುವ ಈ ಸಂಸ್ಥೆಯು ಕೊಡಗು ಪ್ರವಾಹ ಪರಿಹಾರವಾಗಿ 15,420 ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಪ್ಪ ತಹಶೀಲ್ದಾರರ ಮೂಲಕ ಕಳುಹಿಸಿತ್ತು. ಅಲ್ಲದೇ, ಕೊಪ್ಪ ಸಮೀಪದ ಜೊಗಿಸರದ ಸುಲೈಮಾನ್ ರವರು ಟಿಂಬರ್ ಕೂಲಿ ಕೆಲಸ ಮಾಡುವ ಸಂದರ್ಭದಲ್ಲಿ ಮರದ ದಿಮ್ಮಿ ತಲೆಗೆ ಬಿದ್ದು ಆಕಸ್ಮಿಕ ಮರಣ ಹೊಂದಿದಾಗ ಅವರ ಬಡ ಕುಟುಂಬಕ್ಕೆ ಸಹಾಯ ಹಸ್ತ ನೀಡಿತ್ತು. ಈಗ ಸಮಾಜದ ತೀರಾ ಬಡ ಕುಟುಂಬದ ಎರಡು ಹೆಣ್ಣು ಮಕ್ಕಳಿಗೆ ವಿವಾಹ ಭಾಗ್ಯ ನೀಡಿದ್ದು, ಸಂಪೂರ್ಣ ಖರ್ಚು ಭರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News