ಬೆಂಗಳೂರು-ಮುನ್ನಾರ್, ಬೆಂಗಳೂರು-ಪೂನಾ: ಕೆಎಸ್ಸಾರ್ಟಿಸಿಯಿಂಂದ ಹೊಸ ಸಾರಿಗೆ ವ್ಯವಸ್ಥೆ

Update: 2019-05-02 17:12 GMT

ಬೆಂಗಳೂರು, ಮೇ 2: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಮುನ್ನಾರ್ ಮಾರ್ಗದಲ್ಲಿ ನೂತನವಾಗಿ ಹವಾನಿಯಂತ್ರಣ ರಹಿತ ಸ್ಲೀಪರ್ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಅದೇ ರೀತಿ ಬೆಂಗಳೂರು-ಪೂನಾ, ಬೆಂಗಳೂರು-ವಿಜಯವಾಡ, ಬೆಂಗಳೂರು-ಸಿಕಂದ್ರಾಬಾದ್ ಮಾರ್ಗಗಳಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ.ಸ್ಲೀಪರ್) ಸಾರಿಗೆಗಳನ್ನು ಈ ಕೆಳಕಂಡ ವೇಳಾಪಟ್ಟಿಯಂತೆ ಪ್ರಾರಂಭಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ವೇಳಾಪಟ್ಟಿ-ಪ್ರಯಾಣದ ದರ: ಬೆಂಗಳೂರು-ಮುನ್ನಾರ್ (ನಾನ್ ಎ.ಸಿ. ಸ್ಲೀಪರ್) ವಯಾ ಹೊಸೂರು, ಕೊಯಮತ್ತೂರು, ಉಡಮಲ್‌ಪೇಟೆ ಮಾರ್ಗ. ಪ್ರಯಾಣದರ ವಯಸ್ಕರಿಗೆ 800 ರೂ., ಬೆಂಗಳೂರು-ಸಿಕಂದ್ರಾಬಾದ್ ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ.ಸ್ಲೀಪರ್) ವಯಾ ಅನಂತಪುರ, ಗುತ್ತಿ, ಕರ್ನೂಲ್, ಹೈದರಾಬಾದ್ ಮಾರ್ಗ, ಪ್ರಯಾಣ ದರ-1,450 ರೂ.ಗಳು ಎಂದು ತಿಳಿಸಲಾಗಿದೆ.

ಬೆಂಗಳೂರು-ಪೂನಾ ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ ಸ್ಲೀಪರ್) ವಯಾ ದಾವಣಗೆರೆ, ಬೆಳಗಾವಿ ಮಾರ್ಗ ಪ್ರಯಾಣ ದರ-1, 700 ರೂ., ಬೆಂಗಳೂರು- ವಿಜಯವಾಡ ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ ಸ್ಲೀಪರ್) ವಯಾ ಕೋಲಾರ, ಚಿತ್ತೂರು, ತಿರುಪತಿ ಮಾರ್ಗ-ಪ್ರಯಾಣ ದರ-1,500 ರೂ.ಗಳು ಎಂದು ಕೆಎಸ್ಸಾರ್ಟಿಸಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News