ಎಸೆಸೆಲ್ಸಿ: ನಂದಿಬಟ್ಟಲು ಮೊರಾರ್ಜಿ ವಸತಿ ಶಾಲೆಗೆ ಶೇ.100 ಫಲಿತಾಂಶ

Update: 2019-05-02 17:18 GMT

ಲಿಂಗದಹಳ್ಳಿ, ಮೇ 2: ಹೋಬಳಿಯ ಏಕೈಕ ಮೊರಾರ್ಜಿ ವಸತಿ ಶಾಲೆಯಾದ ನಂದಿಬಟ್ಟಲು ವಸತಿ ಶಾಲೆಗೆ ಈ ಬಾರಿ ಎಸೆಸೆಲ್ಸಿಯಲ್ಲಿ ಶೇ.100 ಫಲಿತಾಂಶ ಬಂದಿದೆ.

ವಸತಿ ಶಾಲೆಯ ವಿದ್ಯಾರ್ಥಿ ಎನ್.ಬಿ.ವರುಣ್‍ಗೌಡ 586 ಅಂಕಗಳೊಂದಿಗೆ ಶಾಲೆಗೆ ಮೊದಲಿಗನಾಗಿದ್ದರೆ, ಟಿ.ತೃಪ್ತಿ 576 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾಳೆ. 569 ಅಂಕಗಳಿಸಿರುವ ಟಿ.ಆರ್ ಪಲ್ಲವಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಶಾಲೆಯ ಒಟ್ಟು 7 ಮಂದಿ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಪಡೆದಿದ್ದರೆ, 35 ಮಂದಿ ವಿದ್ಯಾಥಿಗಳು ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬಂದಿದೆ.

ಶಾಲೆಯ ನೂತನ ಪ್ರಾಂಶುಪಾಲ ಎನ್.ಎಂ ತೇಜಸ್ವಿಗೌಡ ಆಂಗ್ಲ ಶಿಕ್ಷಕಿ ಡಿ.ರತ್ನಮ್ಮ, ದೈಹಿಕ ಶಿಕ್ಷಕ ಮತ್ತು ಹಾಸ್ಟೆಲ್ ಉಸ್ತುವಾರಿ ಎಸ್.ಎಂ.ನವೀನ್ ಕುಮಾರ್ ಮತ್ತು ಶಾಲೆಯ ಎಲ್ಲಾ ಶಿಕ್ಷಕರ ಅವಿರತ ಪ್ರಯತ್ನವೇ ಈ ಸಾಧನೆಗೆ ಮೂಲ ಕಾರಣವಾಗಿದೆ ಎಂದು ಪೋಷಕರು ತಿಳಿಸಿದ್ದು, ಮುಂದಿನ ವರ್ಷಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಶಾಲಾಭಿವೃದ್ದಿ ಸಮಿತಿಯ ಪದಾಧಿಕಾರಿಗಳು ಪೋಷಕ ವರ್ಗದವರು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News