ಬುರ್ಖಾ ನಿಷೇಧ ಶಿವಸೇನೆಯ ಬೇಡಿಕೆಯಲ್ಲ: ಶಿವಸೇನೆ ನಾಯಕ ರಾವತ್

Update: 2019-05-05 16:11 GMT

ಮುಂಬೈ,ಮೇ.5: ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಮಾಡಿರುವ ಬುರ್ಖಾ ನಿಷೇಧ ಆಗ್ರಹ ಶಿವಸೇನೆ ಅಥವಾ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆಯ ನಿಲುವಲ್ಲ ಎಂದು ಸಂಜಯ್ ರಾವತ್ ಸ್ಪಷ್ಟಪಡಿಸಿದ್ದಾರೆ.

ರವಿವಾರ ಪ್ರಕಟಗೊಂಡ ಸಾಮ್ನಾದ ವಾರದ ತನ್ನ ಲೇಖನದಲ್ಲಿ ಮರಾಠಿ ದಿನಪತ್ರಿಕೆಯ ಕಾರ್ಯಕಾರಿ ಸಂಪಾದಕಾರಾಗಿರುವ ಸಂಜಯ್ ರಾವತ್, ಬುರ್ಖಾ ನಿಷೇಧ ಶಿವಸೇನೆ ಮಥವಾ ಉದ್ಧವ್ ಠಾಕ್ರೆಯ ಬೇಡಿಯಲ್ಲ. ‘ಸಾಮ್ನಾ’ ಕೇವಲ ಶ್ರೀಲಂಕದ ಬೆಳವಣಿಗೆಯ ವಿಶ್ಲೇಷಣೆಯನ್ನು ಪ್ರಕಟಿಸಿದೆ ಎಂದು ತಿಳಿಸಿದ್ದರು. ಸಾಮ್ನಾದ ಬುಧವಾರದ ಆವೃತಿಯಲ್ಲಿ, ಪ್ರಧಾನಿ ಮೋದಿ ಶ್ರೀಲಂಕ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರ ಮಾದರಿಯನ್ನು ಅನುಸರಿಸಿ ಬುರ್ಖಾ ಮತ್ತು ಇತರ ಮುಖ ಮುಚ್ಚುವ ಬಟ್ಟೆಗಳು ದೇಶದ ಭದ್ರತೆಗೆ ಅಪಾಯವೊಡ್ಡುವುದನ್ನು ಪರಿಗಣಿಸಿ ಅವುಗಳ ಮೇಲೆ ನಿಷೇಧ ಹೇರಬೇಕು ಎಂದು ಆಗ್ರಹಿಸಲಾಗಿತ್ತು. ಈ ಸಂಪಾದಕೀಯ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.

ಶುಕ್ರವಾರದಂದು ನೂರಾರು ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸಿ ಬೀದಿಗಿಳಿದು ಸಂಜಯ್ ರಾವತ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿದ ಪಕ್ಷದ ಹಿರಿಯ ನಾಯಕಿ ಮತ್ತು ವಿಧಾನ ಪರಿಷತ್ ಸದಸ್ಯೆ ನೀಲಂ ಗೊರೆ, ಬುರ್ಖಾ ನಿಷೇಧ ಶಿವಸೇನೆಯ ನಿಲುವಲ್ಲ ಎಂದು ಸ್ಪಷ್ಟನೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News