ನೈಜೀರಿಯಾದಲ್ಲಿ ಕಡಲ್ಗಳ್ಳರಿಂದ ಐವರು ಭಾರತೀಯ ನಾವಿಕರ ಅಪಹರಣ: ದೃಢಪಡಿಸಿದ ಸುಷ್ಮಾ ಸ್ವರಾಜ್

Update: 2019-05-07 15:51 GMT

ಹೊಸದಿಲ್ಲಿ, ಮೇ 7: ನೈಜೀರಿಯಾದಲ್ಲಿ ನಿಯೋಜನೆಯಾಗಿದ್ದ ಐವರು ಭಾರತೀಯ ನಾವಿಕರನ್ನು ಕಡಲ್ಗಳ್ಳರು ಅಪಹರಿಸಿರುವು ದನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ದೃಢಪಡಿಸಿದ್ದಾರೆ.

ನಾವಿಕರನ್ನು ಕೂಡಲೇ ಬಿಡುಗಡೆಗೊಳಿಸಲು ಈ ವಿಚಾರವನ್ನು ನೈಜೀರಿಯಾ ಸರಕಾರಕ್ಕೆ ತಿಳಿಸುವಂತೆ ಸುಷ್ಮಾ ಸ್ವರಾಜ್ ಅವರು ನೈಜೀರಿಯಾದಲ್ಲಿರುವ ಭಾರತೀಯ ರಾಯಭಾರಿ ಅಭಯ್ ಠಾಕೂರ್ ಅವರಿಗೆ ಸೂಚಿಸಿದ್ದಾರೆ.

‘‘ನೈಜೀರಿಯಾದಲ್ಲಿ ಐವರು ಭಾರತೀಯ ನಾವಿಕರನ್ನು ಕಡಲ್ಗಳ್ಳರು ಅಪಹರಿಸಿರುವ ಸುದ್ದಿಯನ್ನು ನಾನು ಓದಿದ್ದೇನೆ.’’ ಎಂದು ಸುಷ್ಮಾ ಸ್ವರಾಜ್ ಸೋಮವಾರ ಟ್ವೀಟ್ ಮಾಡಿದ್ದರು.

‘‘ಅವರನ್ನು ಬಿಡುಗಡೆ ಮಾಡಲು ನೈಜೀರಿಯಾ ಸರಕಾರದೊಂದಿಗೆ ಮಾತುಕತೆ ನಡೆಸುವಂತೆ ಭಾರತೀಯ ಹೈಕಮಿಷನ್‌ಗೆ ನಿರ್ದೇಶನ ನೀಡಿದ್ದೇನೆ’’ ಎಂದು ಅವರು ತಿಳಿಸಿದ್ದಾರೆ.

ಕಳೆದ ತಿಂಗಳು ಐವರು ಭಾರತೀಯ ನಾವಿಕರನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ. ಅವರ ಹಡಗುನ್ನು ಕೂಡ ಕೊಂಡೊಯ್ದಿದ್ದಾರೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡಿದ ಕೆಲವು ದಿನಗಳ ಬಳಿಕ ಸುಷ್ಮಾ ಸ್ವರಾಜ್ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News