ಜಾದವ್ ಸರಕಾರಿ ಕೆಲಸದಿಂದ ಸಸ್ಪೆಂಡ್ ಆದವರು: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-05-07 15:54 GMT

ಚಿಂಚೋಳಿ, ಮೇ 7: ಉಮೇಶ್‌ ಜಾದವ್‌ ಸರಕಾರಿ ನೌಕರನಾಗಿದ್ದ ವೇಳೆ ಸಸ್ಪೆಂಡ್ ಆಗಿದ್ದವರು. ಇಂಥವರ ಪರ ಜನಗಳೇ ನಿಲ್ಲುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.  

ಚಿಂಚೋಳಿ ಉಪಚುನಾವಣೆಯಲ್ಲಿ ನಿಮಿತ್ತ ಚಂದನಕೇರಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಜಾಧವ್ ಸರಕಾರ ನೌಕರನಾಗಿದ್ದಾಗ ಅದೇನೋ ಮಾಡಿ ಸಸ್ಪೆಂಡ್ ಆಗಿದ್ದನಂತೆ. ಆತನ ಮೇಲೆ ಮೇಲೆ ವಿಚಾರಣೆ ಬಾಕಿಯಿದೆ ಎಂಬ ಮಾಹಿತಿ ಬಂದಿದೆ. ಪಕ್ಷಕ್ಕೆ ದ್ರೋಹ ಬಗೆದವರನ್ನು ಜನರು ಹತ್ತಿರವೂ ಸೇರಿಸುವುದಿಲ್ಲ ಎಂದರು.

ನಮ್ಮೊಂದಿಗೆ ಇದ್ದ ಜಾದವ್ ಮಾರನೇ ದಿನ ಬಾಂಬೆಯಲ್ಲಿ ಬಿಜೆಪಿಯವರ ಜೊತೆ ಪಂಚತಾರ ಹೊಟೇಲ್ ನಲ್ಲಿ ಕಾಣಿಸಿಕೊಂಡರು.‌ ಜಾಧವ್ ಬಿಜೆಪಿಯವರಿಂದ 50 ಕೋಟಿ ಹಣ ಪಡೆದು ಸೇಲ್ ಆಗಿದ್ದಾನೆ ಎಂದು ಜನ ಮಾತನಾಡುತ್ತಿದ್ದಾರೆ. ಜನರ ನಂಬಿಕೆ ಹಾಳು ಮಾಡಿದ್ದಲ್ಲದೇ ಈಗ ಮಗನ ಪರ ಮತ ಕೇಳಲು ಬಂದಿದ್ದಾರೆ. ಮಗನನ್ನೂ ಸಹ ಮಾರಾಟ ಮಾಡಬಹುದು ಎನ್ನುವ ಪ್ಲಾನ್ ಇದೆಯೇನೋ ಎಂದು ಅನುಮಾನ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ರಹೀಂ ಖಾನ್, ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಎಚ್.ಟಿ ಸೋಮಶೇಖರ್, ಕೈಲಾಶ ನಾಥ ಪಾಟೀಲ್ ಜಿಲ್ಲಾ ಕಾಂಗ್ರೇಸ್ ಕಮಿಟಿ ಅಧ್ಯಕ್ಷ ಜಗದೇವ ಗುತ್ತೇದಾರ್, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಅನೇಕರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News