ಉತ್ತರ ಕೊರಿಯದ ಸರಕು ಹಡಗು ವಶಪಡಿಸಿದ ಅಮೆರಿಕ

Update: 2019-05-11 04:06 GMT

ನ್ಯೂಯಾರ್ಕ್, ಮೇ 10: ಅಂತರ್‌ರಾಷ್ಟ್ರೀಯ ದಿಗ್ಬಂಧನಗಳನ್ನು ಉಲ್ಲಂಘಿಸಿರುವ ಉತ್ತರ ಕೊರಿಯದ ಸರಕು ಹಡಗೊಂದನ್ನು ವಶಪಡಿಸಿಕೊಂಡಿರುವುದಾಗಿ ಅಮೆರಿಕ ಗುರುವಾರ ಘೋಷಿಸಿದೆ.

ಉತ್ತರ ಕೊರಿಯ ನೋಂದಣಿಯ ಸರಕು ಹಡಗು ‘ಎಂ/ವಿ ವೈಸ್ ಆನೆಸ್ಟ್’ನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಅಮೆರಿಕದ ಕಾನೂನು ಇಲಾಖೆ ಹೇಳಿದೆ. ಒಂದು ವರ್ಷದ ಹಿಂದೆ ಇದೇ ಹಡಗನ್ನು ಇಂಡೋನೇಶ್ಯದಲ್ಲಿ ಹಿಡಿದಿಡಲಾಗಿತ್ತು.

ಹಡಗಿನ ಮಾಲೀಕ ಕೊರಿಯ ಸೊಂಗಿ ಶಿಪ್ಪಿಂಗ್ ಕಂಪೆನಿಯು ಈ ಹಡಗನ್ನು ಅಕ್ರಮವಾಗಿ ಕಲ್ಲಿದ್ದಲು ರಫ್ತು ಮಾಡಲು ಹಾಗೂ ಬೃಹತ್ ಯಂತ್ರಗಳನ್ನು ಆಮದು ಮಾಡಿಕೊಳ್ಳಲು ಬಳಸುತ್ತಿತ್ತು ಹಾಗೂ ಅದರ ನಿರ್ವಹಣೆಗಾಗಿ ಡಾಲರ್‌ನಲ್ಲಿ ಹಣ ನೀಡಿತ್ತು ಎಂದು ಅದು ಹೇಳಿದೆ.

ಇದು ಉತ್ತರ ಕೊರಿಯದ ಮೇಲೆ ವಿಧಿಸಲಾಗಿರುವ ಅಮೆರಿಕ ಮತ್ತು ಅಂತರ್‌ರಾಷ್ಟ್ರೀಯ ದಿಗ್ಬಂಧನಗಳ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News