ನೀವು ನಿಮ್ಮ ಮಗುವನ್ನು ಈ ಕೆಳಗಿನ ಯಾರಾದರೂ ಒಬ್ಬರ ಜೊತೆ ಮನೆಯಲ್ಲಿ ಬಿಟ್ಟು ಹೋಗುವುದಾದರೆ ಯಾರ ಜೊತೆ ಬಿಡುವಿರಿ ?

Update: 2019-05-11 07:09 GMT

ನೀವು ನಿಮ್ಮ ಮಗುವನ್ನು ಈ ಕೆಳಗಿನ ಯಾರಾದರೂ ಒಬ್ಬರ ಜೊತೆ ಮನೆಯಲ್ಲಿ ಬಿಟ್ಟು ಹೋಗುವುದಾದರೆ ಯಾರ ಜೊತೆ ಬಿಡುವಿರಿ ?

ಪ್ರಜ್ಞಾ ಸಿಂಗ್ ಠಾಕೂರ್ 

ನರೇಂದ್ರ ಮೋದಿ 

ಅಮಿತ್ ಷಾ 

ರಾಹುಲ್ ಗಾಂಧಿ 

ನೀವು ಕೌನ್ ಬನೇಗಾ ಕರೋಡ್ ಪತಿಯಲ್ಲಿ ಒಂದು ಕೋಟಿಯ ಪ್ರಶ್ನೆ ಎದುರಿಸುತ್ತಿದ್ದು , ಉತ್ತರ ಗೊತ್ತಿಲ್ಲದೇ ಇದ್ದು ಈ ಕೆಳಗಿನ ಒಬ್ಬರಿಗೆ ಮಾತ್ರ ಫೋನ್ ಮಾಡುವ ಅವಕಾಶ ಇದ್ದರೆ ಯಾರಿಗೆ ಫೋನ್ ಮಾಡುತ್ತೀರಿ ?

ಸ್ಮೃತಿ ಇರಾನಿ 

ಆತಿಶಿ (ಆಪ್ ನಾಯಕಿ)

ಇಂತಹ ಮೊದಲ ನೋಟಕ್ಕೆ ಕಚಗುಳಿ ಇಡುವ ಆದರೆ ಅಷ್ಟೇ ಗಂಭೀರವಾಗಿರುವ ಪ್ರಶ್ನೆಗಳನ್ನು ಕೇಳುವ Apolitical Harry Potter ಎಂಬ ಟ್ವಿಟರ್ ಖಾತೆಯೊಂದು ಭಾರೀ ಚರ್ಚೆಗೆ ಹಾಗೆ ಅಷ್ಟೇ ನಗುವಿಗೆ ಕಾರಣವಾಗಿದೆ. ಚುನಾವಣೆ ಸಂಪೂರ್ಣ ಮುಗಿಯುವವರೆಗೆ ಮತಗಟ್ಟೆ ಸಮೀಕ್ಷೆ ನಡೆಸುವಂತೆ ಇಲ್ಲ. ಆದರೆ ಸಮೀಕ್ಷೆ ನೋಡಿ ಖುಷಿಪಡುವ, ತಲೆಬಿಸಿ ಮಾಡಿಕೊಳ್ಳುವ , ಚರ್ಚೆಗಿಳಿಯುವ ಜನರಿಗೆ ಈ ಟ್ವಿಟರ್ ಖಾತೆ ಆ ಬಹಳಷ್ಟು ಮಟ್ಟಿಗೆ ಆ ಕೊರತೆ ನೀಗಿಸಿದೆ.

ಮೊದಲ ನೋಟಕ್ಕೆ ಇದು ಬಿಜೆಪಿ ರಾಜಕೀಯವನ್ನು ವಿರೋಧಿಸುವ ಖಾತೆ ಎಂಬುದು ಸ್ಪಷ್ಟ. ಆದರೆ ಅದರ ಪ್ರಶ್ನೆಗಳ ಬಗ್ಗೆ ಯಾರೂ ಅಂತಹ ತಕರಾರು ಎತ್ತುವಂತಿಲ್ಲ. ಈ ಪ್ರಶ್ನೆಗಳಿಗೆ ಬಂದಿರುವ ಉತ್ತರಗಳೂ ಬಿಜೆಪಿ ಹಾಗು ಅದರ ಬೆಂಬಲಿಗರಿಗೆ ಖುಷಿ ಕೊಡುವಂತಹದ್ದಲ್ಲ. ಉದಾಹರಣೆಗೆ ಮೇಲಿನ ಮೊದಲ ಪ್ರಶ್ನೆಗೆ 71% ಜನರು ರಾಹುಲ್ ಗಾಂಧಿ ಬಳಿ ಮಗುವನ್ನು ಬಿಟ್ಟು ಹೋಗುತ್ತೇವೆ ಎಂದಿದ್ದರೆ 23% ಜನರು ಮಾತ್ರ ಮೋದಿ ಹೆಸರು ಹೇಳಿದ್ದಾರೆ. ಕೇವಲ 4% ಮಂದಿ ಪ್ರಜ್ಞಾ ನಮ್ಮ ಆಯ್ಕೆ ಎಂದಿದ್ದರೆ ಅಮಿತ್ ಷಾ ಬಳಿ ಮಗುವನ್ನು ಬಿಟ್ಟು ಹೋಗುವ ಧೈರ್ಯ ತೋರಿದವರು 2% ಮಾತ್ರ. ಈ 'ಮತದಾನಕ್ಕೆ' ಬಂದಿರುವ ಪ್ರತಿಕ್ರಿಯೆಗಳೂ ಅಷ್ಟೇ ಮಜವಾಗಿವೆ. "ಇದು ನಮ್ಮ ಚುನಾವಣಾ ಆಯೋಗ ನಡೆಸುವ ಮತದಾನಕ್ಕಿಂತ ಚೆನ್ನಾಗಿದೆ " ಎಂದು ಒಬ್ಬ ಹೇಳಿದರೆ "ಅಮಿತ್ ಷಾ ಗೆ 2% ಮತ ಬಿದ್ದಿದ್ದು ಇವಿಎಂ ನಿಂದ"  ಎಂದು ಕಿಚಾಯಿಸಿದ್ದಾರೆ. ಇನ್ನು ಕೆಲವರು ನೀನು ಕಾಂಗ್ರೆಸ್ ಏಜೆಂಟ್ ಎಂದು ಹರಿಹಾಯ್ದಿದ್ದಾರೆ. ಇನ್ನೊಬ್ಬರು "ನಾನು ನನ್ನ ಮಗುವನ್ನು ಮೊದಲ ಮೂವರ ಬಳಿ ಬಿಟ್ಟು ಹೋಗುತ್ತೇನೆ, ಆತ ಆ ಮೂವರನ್ನು ಗೋಳು ಹೊಯ್ದುಕೊಳ್ಳುತ್ತಾನೆ " ಎಂದು ಹೇಳಿದ್ದಾರೆ. 

ಕೌನ್ ಬನೇಗಾ ಕರೋಡ್ ಪತಿ ಕುರಿತ ಪ್ರಶ್ನೆಯಲ್ಲೂ ಸ್ಮೃತಿ ಇರಾನಿ ಯನ್ನು ಆಯ್ಕೆ ಮಾಡಿದವರು ಕೇವಲ 18%ಮಂದಿ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ, ಆಕ್ಸ್ ಫರ್ಡ್ ನಲ್ಲಿ ಕಲಿತ ಆತಿಷಿಗೆ 82% ಮಂದಿ 'ಮತ' ಹಾಕಿದ್ದಾರೆ. ಅಲ್ಲೂ ನಗೆ ಚಟಾಕಿ ಹರಿಸುವ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. "ಪ್ರಶ್ನೆ ಕೇಳುವವರು ಮೋದಿ ಆಗಿದ್ದರೆ ಮಾತ್ರ ನಾನು ಸ್ಮೃತಿ ಇರಾನಿಗೆ ಫೋನ್ ಮಾಡುತ್ತೇನೆ" ಎಂದು ಒಬ್ಬರು ಹೇಳಿದರೆ , "ಈ 18% ಮಂದಿ ಸ್ಮೃತಿ ಇರಾನಿಗೆ ಫೋನ್ ಮಾಡುವ ಧೈರ್ಯ ಮಾಡಿದ್ದಾದರೂ ಹೇಗೆ" ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. 

ಇನ್ನೂ ಹಲವು ತಮಾಷೆಯ ಮತ್ತು ಗಂಭೀರ ಪ್ರಶ್ನೆಗಳನ್ನು ಈ ಖಾತೆ ಕೇಳುತ್ತದೆ. ನೀವೇ ಚೆಕ್ ಮಾಡಿ ನೋಡಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News