ನಡಾಲ್ ಗೆ ಸೋಲು: ಮ್ಯಾಡ್ರಿಡ್ ಫೈನಲ್ ತಲುಪಿದ ಯುವ ಗ್ರೀಕ್ ಆಟಗಾರ

Update: 2019-05-12 04:03 GMT
ರಫೇಲ್ ನಡಾಲ್‌

ಮ್ಯಾಡ್ರಿಡ್, ಮೇ 12: ಫ್ರಾನ್ಸ್ ಓಪನ್ ಟೆನಿಸ್‌ಗೆ ಮುನ್ನ ರಫೇಲ್ ನಡಾಲ್‌ಗೆ ಮತ್ತೊಂದು ಅಚ್ಚರಿಯ ಸೋಲು ಎದುರಾಗಿದೆ. ಹದಿನೇಳು ಗ್ರಾಂಡ್‌ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿರುವ ಈ ಖ್ಯಾತ ಆಟಗಾರ ಮ್ಯಾಡ್ರಿಡ್ ಓಪನ್ ಸೆಮಿ ಫೈನಲ್‌ನಲ್ಲಿ ಗ್ರೀಸ್‌ನ 20 ವರ್ಷದ ಯುವ ಆಟಗಾರನ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದಾರೆ.

ದೈತ್ಯ ಸಂಹಾರಿ ಸ್ಟೆಫನೋಸ್ ಸಿಸಿಪಾಸ್, 6-4, 2-6, 6-3ರಿಂದ ನಡಾಲ್ ಅವರನ್ನು ಬಗ್ಗುಬಡಿದು ಇದೀಗ ಫೈನಲ್‌ನಲ್ಲಿ ನೊವಾಕ್ ಜೋಕೊವಿಕ್ ಸವಾಲು ಎದುರಿಸಲಿದ್ದಾರೆ.

ಈ ಸೀಸನ್‌ನಲ್ಲಿ ನಾಲ್ಕು ಎಟಿಪಿ ಕೂಟಗಳಲ್ಲಿ ಫೈನಲ್ ತಲುಪಿರುವ ಸಿಸಿಪಾಸ್, ಭವಿಷ್ಯದಲ್ಲಿ ಪುರುಷರ ಟೆನಿಸ್‌ನ ತಾರೆಯಾಗುವ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ. "ಭಾವನಾತ್ಮಕವಾಗಿ ಇದು ಬಹಳ ಕಠಿಣವಾಗಿತ್ತು. ಇದು ನನ್ನ ಅತ್ಯಂತ ಕಠಿಣ ಜಯ" ಎಂದು ಸಿಸಿಪಾಸ್ ಪ್ರತಿಕ್ರಿಯಿಸಿದ್ದಾರೆ.

ಹದಿನೇಳು ಬಾರಿ ಗ್ರಾಂಡ್‌ ಸ್ಲಾಂ ಕಿರೀಟಕ್ಕೆ ಮುತ್ತಿಕ್ಕಿದ ನಡಾಲ್, ಜೊಕೋವಿಕ್ ಅವರನ್ನು ಎದುರಿಸುವ ಫೇವರಿಟ್ ಆಟಗಾರರಾಗಿದ್ದರು. ಆದರೆ ಕಳೆದ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ರೋಜರ್ ಫೆಡರರ್ ಅವರನ್ನು ಟೂರ್ನಿಯಿಂದ ಹೊರಗಟ್ಟಿದ್ದ ಸಿಸಿಪಾಸ್ ಆಕರ್ಷಕ ಮುಂಗೈ ಹೊಡೆತ ಮತ್ತು ಪ್ರಬುದ್ಧ ಆಟದ ಮೂಲಕ ಗೆಲುವಿನ ನಗೆ ಬೀರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News