ಪೆಸಿಫಿಕ್ ಸಾಗರದ ಅತ್ಯಂತ ಆಳದಲ್ಲೂ ಪ್ಲಾಸ್ಟಿಕ್!

Update: 2019-05-15 07:55 GMT

ನ್ಯೂಯಾರ್ಕ್, ಮೇ 14: ಈವರೆಗೆ ಮಾನವರು ಪ್ರಯಾಣಿಸದ ಸಾಗರದ ಅತ್ಯಂತ ಆಳದಲ್ಲೂ ಮಾನವ ನಾಗರಿಕತೆಯ ತ್ಯಾಜ್ಯಗಳು ಪತ್ತೆಯಾಗಿವೆ.

ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಡಿಕೆದಾರ ಹಾಗೂ ಸಂಶೋಧಕ ವಿಕ್ಟರ್ ವೆಸ್ಕೋವೊ ಈ ಆಘಾತಕಾರಿ ‘ಸಂಶೋಧನೆ’ಯನ್ನು ಮಾಡಿದ್ದಾರೆ.

 ನಿವೃತ್ತ ನೌಕಾ ಪಡೆ ಅಧಿಕಾರಿಯೂ ಆಗಿರುವ ವಿಕ್ಟರ್ ಪೆಸಿಫಿಕ್ ಸಾಗರದಲ್ಲಿ ಸಬ್‌ಮರೀನ್ ಮೂಲಕ 10.92 ಕಿಲೋಮೀಟರ್ ಮುಳುಗಿ ಹೊಸ ದಾಖಲೆ ಮಾಡಿದ ವೇಳೆ ತ್ಯಾಜ್ಯಗಳು ಪತ್ತೆಯಾಗಿವೆ.

ಅವರು ಇಳಿದ ಜಾಗ ಮರಿಯಾನ ಟ್ರೆಂಚ್ ಭೂಮಿಯ ಮೇಲಿನ ಅತಿ ಆಳದ ಸ್ಥಳವಾಗಿದೆ. ಅತಿ ಆಳದ ಸ್ಥಳಕ್ಕೆ ಮುಳುಗಿದ ಈ ಹಿಂದಿನ ದಾಖಲೆ 1960ರಲ್ಲಿ ನಿರ್ಮಾಣವಾಗಿದೆ. ಅಂದಿಗಿಂತ ಈ ಬಾರಿ ವಿಕ್ಟರ್ 52 ಅಡಿ ಹೆಚ್ಚು ಆಳಕ್ಕೆ ಇಳಿದಿದ್ದಾರೆ.

ಈ ಸಂದರ್ಭದಲ್ಲಿ ಈವರೆಗೆ ಕಂಡಿರ ಜೀವರಾಶಿಯನ್ನು ಅವರು ನೋಡಿದ್ದಾರೆ. ಅದೇ ವೇಳೆ, ಲೋಹ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನೂ ಪತ್ತೆಹಚ್ಚಿದ್ದಾರೆ. ಈ ಪೈಕಿ ಒಂದರಲ್ಲಿ ಬರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News