ಕಾಫಿತೋಟದಲ್ಲಿ ಅಕ್ರಮ ಮರ ಸಂಗ್ರಹ : ಸುಂಟಿಕೊಪ್ಪದಲ್ಲಿ ಪ್ರಕರಣ ದಾಖಲು

Update: 2019-05-15 11:52 GMT

ಮಡಿಕೇರಿ,ಮೇ.15: ಚಿಕ್ಲಿಹೊಳೆ ಸಮೀಪದ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಕಡಿದು ಸಂಗ್ರಹಿಸಿಟ್ಟಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಬೀಟೆ ಮರವನ್ನು ಜಿಲ್ಲಾ ಅಪರಾಧ ಪತ್ತೆ ದಳ ಪತ್ತೆ ಹಚ್ಚಿದೆ. ಪ್ರಕರಣದ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು, ಬೀಟೆ ಮರವನ್ನು ವಶಕ್ಕೆ ಪಡೆಯಲಾಗಿದೆ.

ಸಿಲ್ವರ್, ಬೀಟೆ ಸೇರಿದಂತೆ ಇನ್ನಿತರ ಮರಗಳನ್ನು ಕಡಿದಿರುವ ಬಗ್ಗೆ ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಅಧಿಕಾರಿಗಳು ಧಾಳಿ ನಡೆಸಿದರು. ಬೇರೆ ಜಾತಿಯ ಮರಗಳೊಂದಿಗೆ ಬೀಟೆ ಮರಗಳನ್ನು ಕಡಿದು ಅವುಗಳನ್ನು ನಾಟಾಗಳನ್ನಾಗಿ ಪರಿವರ್ತಿಸಿ, ಮುಚ್ಚಿಟ್ಟಿರುವುದು ಕಂಡು ಬಂದಿದೆ. ಮಾತ್ರವಲ್ಲದೇ, ಬೃಹತ್ ಗಾತ್ರದ ಬೀಟೆ ನಾಟಾಗಳನ್ನು ಸ್ಥಳದಿಂದ ಅಕ್ರಮವಾಗಿ ಸಾಗಿಸಿರುವುದು ಪತ್ತೆಯಾಗಿದೆ. ತೋಟದ ಮಾಲೀಕರ ಬೆಂಬಲದಿಂದಲೇ ಮರಕಳ್ಳರು ಈ ಕೃತ್ಯ ಎಸಗಿರಬಹುದೆಂದು ಸಂಶಯ ವ್ಯಕ್ತಪಡಿಸಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News