ದಾವಣಗೆರೆ: ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಧರಣಿ

Update: 2019-05-15 12:03 GMT

ದಾವಣಗೆರೆ: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು. 

ಪಾಲಿಕೆ ಬಳಿ ಜಮಾಯಿಸಿದ ಎಸ್‍ಯುಸಿಐ ಕಾರ್ಯಕರ್ತರು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಆಯುಕ್ತರಿಗೆ ಮನವಿ ಸಲ್ಲಿಸಿದರು. 

ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಮಾತನಾಡಿ, ಹೆಚ್.ಕೆ.ಆರ್.ನಗರದ 1-2 ಹಾಗೂ 3ನೇ ಕ್ರಾಸ್‍ನ ನಾಗರೀಕರಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಸ್ವಚ್ಚ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.  ಜೀವನ ಸಾಗಿಸಲು ದಿನನಿತ್ಯದ ಕೆಲಸ ಕಾರ್ಯಗಳಿಗೆ ಬೋರ್ ನೀರಿನ ಅಗತ್ಯವು ಉಂಟು, ನೀರೇ ಇಲ್ಲದಿದ್ದರೆ ಬದುಕುವುದುದಾದರು ಹೇಗೆ? ಬಡವರು ಕೂಲಿ ಕೆಲಸ ಮಾಡುವವರೂ ಕುಡಿಯುವ ನೀರಿಗಾಗಿ ಪರದಾಟ ಪಡುವ ಸ್ಥಿತಿ  ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.   

ನೀರಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಹೆಚ್.ಕೆ.ಆರ್. ನಗರದ 3ನೇ ಕ್ರಾಸ್‍ನಲ್ಲಿ  ಸಣ್ಣ ಚರಂಡಿಗಳ ಕಸ ವಿಲೇವಾರಿ ಹಾಗೂ ಸ್ವಚ್ಚತೆ ನಡೆದು ಒಂದೂವರೆ ವರ್ಷ ಕಳೆಯಿತು. ಇಲ್ಲಿಯವರೆಗೂ ಯಾವ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಚಿಕ್ಕ ಮಕ್ಕಳು, ಗರ್ಭಿಣಿಯರು ಬಹಳ ಬೇಗ ರೋಗ ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.  ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.  

ಶುದ್ದಕುಡಿಯುವ ನೀರಿನಘಟಕ ಶೀರ್ಘದಲ್ಲಿಯೇ ಪ್ರಾರಂಭಿಸಬೇಕು.  ಹೆಚ್.ಕೆ.ಆರ್.ನಗರದ 1-2 ಹಾಗೂ 3ನೇ ಕ್ರಾಸ್‍ಗಳಲ್ಲಿ ಕುಡಿಯುವ ನೀರನ್ನು ನಾಲ್ಕು ದಿನಕ್ಕೊಮ್ಮೆ ಬಿಡಬೇಕು. ಹಾಗೂ ನಿಗದಿತ ದಿನದ ಬೆಳಿಗ್ಗೆ 6 ಅಥವಾ 7 ಗಂಟೆಗೆ ಬಿಡಬೇಕು,  1-2 ಹಾಗೂ 3ನೇ ಕ್ರಾಸ್‍ಗಳಿಗೆ ಬೋರ್ ನೀರಿನ ವ್ಯವಸ್ಥೆ ಈ ಕೂಡಲೇ ಮಾಡಿಕೊಡಬೇಕು.  ನಗರಗಳಲ್ಲಿ ಬರುವ ಸಣ್ಣ ಚರಂಡಿಗಳ ಸ್ವಚ್ಚತೆ ಮಾಡಬೇಕು ಎಂದು ಆಗ್ರಹಿಸಿದರು. 

ಪರಶುರಾಮ್, ನಾಗಜ್ಯೋತಿ, ,ಸಿದ್ದೇಶ್ ಹಾಗು ನಗರ ವಾಸಿಗಳಾದ ಶಿವಮ್ಮ, ಶಾನಕ್ಕ, ಗೌರಮ್ಮ, ಶಾಂತಮ್ಮ, ಮಂಜುಳಮ್ಮ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News