ವಿಶ್ವಕಪ್ ನಲ್ಲಿ ಭಾಗವಹಿಸುವ 10 ತಂಡಗಳ ಕಿರು ವಿವರ

Update: 2019-05-18 02:59 GMT

ಲಂಡನ್, ಮೇ 17: ಹನ್ನೆರಡನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಈ ಬಾರಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಆತಿಥ್ಯದಲ್ಲಿ ನಡೆಯಲಿದೆ. ಒಟ್ಟು 10 ತಂಡಗಳು ವಿಶ್ವಕಪ್‌ನಲ್ಲಿ ಸೆಣಸಾಡಲಿವೆ. ಈ ಬಾರಿಯ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ 10 ತಂಡಗಳೆಂದರೆ: ಇಂಗ್ಲೆಂಡ್(ಆತಿಥೇಯ),ಆಸ್ಟ್ರೇಲಿಯ, ಬಾಂಗ್ಲಾದೇಶ, ಭಾರತ, ನ್ಯೂಝಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕ, ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್. ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಆಸ್ಟ್ರೇಲಿಯ ಐದು ಬಾರಿ ವಿಶ್ವ ಚಾಂಪಿಯನ್ ಆಗಿದೆ. ಭಾರತ(1983, 2011) ಹಾಗೂ ವೆಸ್ಟ್‌ಇಂಡೀಸ್(1975,1979)ತಲಾ ಎರಡು ಬಾರಿ ಪ್ರಶಸ್ತಿ ಬಾಚಿಕೊಂಡಿವೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲ 10 ತಂಡಗಳ ಕಿರು ವಿವರ ಇಲ್ಲಿದೆ...

►ಭಾರತ

ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 12 ವರ್ಷಗಳ ಬಳಿಕ ಭಾರತದ ವಿಶ್ವಕಪ್ ತಂಡಕ್ಕೆ ವಾಪಸಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗಿದ್ದು, ಧೋನಿ ಉತ್ತರಾಧಿಕಾರಿಯೆಂದೇ ಬಿಂಬಿತವಾಗಿರುವ ರಿಷಭ್ ಪಂತ್‌ರನ್ನು ಹಿಂದಿಕ್ಕಿದ ಕಾರ್ತಿಕ್ ವಿಶ್ವಕಪ್ ತಂಡದಲ್ಲಿ 2ನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿತ್ತು.

►ಆಸ್ಟ್ರೇಲಿಯ

ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್‌ಗೆ ಆಸ್ಟ್ರೇಲಿಯದ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ, ಸ್ಟ್ರೈಕ್ ಬೌಲರ್ ಜೋಶ್ ಹೇಝಲ್‌ವುಡ್‌ಗೆ ಅವಕಾಶ ಕಲ್ಪಿಸಲಾಗಿಲ್ಲ. ಬೆನ್ನುನೋವಿನಿಂದ ಬಳಲುತ್ತಿರುವ ಜೋಶ್ ಪೂರ್ಣ ಫಿಟ್ನೆಸ್ ಪಡೆಯುವ ಅಗತ್ಯವಿದೆ ಎಂದು ಆಯ್ಕೆಗಾರರು ಹೇಳಿದ್ದಾರೆ.

►ಇಂಗ್ಲೆಂಡ್

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಘೋಷಿಸಿರುವ ಇಂಗ್ಲೆಂಡ್‌ನ ವಿಶ್ವಕಪ್ ತಂಡದಲ್ಲಿ ಜೋ ಡೆನ್ಲಿ ಹಾಗೂ ಟಾಮ್ ಕರನ್ ಸೇರ್ಪಡೆಯಾಗಿದ್ದಾರೆ. ಈ ವರ್ಷದ ವಿಶ್ವಕಪ್‌ಗೆ ನ್ಯೂಝಿಲ್ಯಾಂಡ್ ತಂಡ 15 ಸದಸ್ಯರನ್ನು ಒಳಗೊಂಡ ಅನುಭವಿ ತಂಡವನ್ನು ಕಣಕ್ಕಿಳಿಸಲಿದೆ. ಟಾಮ್ ಬ್ಲಂಡೆಲ್‌ರನ್ನು ಮೀಸಲು ವಿಕೆಟ್‌ಕೀಪರ್ ಆಗಿ ನೇಮಿಸಿದ್ದು ಅಚ್ಚರಿ ಎನಿಸಿದೆ. ಆರು ಬಾರಿ ಸೆಮಿ ಫೈನಲ್ ಹಂತದಲ್ಲಿ ನಿರ್ಗಮಿಸಿರುವ ನ್ಯೂಝಿಲ್ಯಾಂಡ್ 2015ರಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿದ್ದರೂ ಆಸ್ಟ್ರೇಲಿಯ ವಿರುದ್ಧ ಹೀನಾಯವಾಗಿ ಸೋತಿತ್ತು.

►ಪಾಕಿಸ್ತಾನ 

ಪಾಕಿಸ್ತಾನ ವಿಶ್ವಕಪ್ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 2015ರ ವಿಶ್ವಕಪ್‌ನಲ್ಲಿ ಆಡಿದ್ದ ಸರ್ಫರಾಝ್ ಅಹ್ಮದ್ ಹಾಗೂ ಹಾರಿಸ್ ಸೊಹೈಲ್, 2007ರ ವಿಶ್ವಕಪ್‌ನಲ್ಲಿ ಆಡಿದ್ದ ಶುಐಬ್ ಮಲಿಕ್, 2007 ಹಾಗೂ 2011ರ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಮುಹಮ್ಮದ್ ಹಫೀಝ್ ತಂಡದಲ್ಲಿದ್ದಾರೆ.

►ದಕ್ಷಿಣ ಆಫ್ರಿಕ

ದಕ್ಷಿಣ ಆಫ್ರಿಕ ತಂಡ ತನ್ನ ವಿಶ್ವಕಪ್ ತಂಡದಲ್ಲಿ ಫಾರ್ಮ್‌ನಲ್ಲಿಲ್ಲದ ಆರಂಭಿಕ ದಾಂಡಿಗ ಹಾಶಿಮ್ ಅಮ್ಲಗೆ ಅವಕಾಶ ನೀಡಿದೆ. ಕಳೆದ ಒಂದು ವರ್ಷದಿಂದ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಅಮ್ಲ ಅವರ ಆಯ್ಕೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

►ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ತಂಡ ವೇಗದ ಬೌಲರ್ ಹಾಮಿದ್ ಹಸನ್‌ರನ್ನು 15 ಸದಸ್ಯರ ವಿಶ್ವಕಪ್ ತಂಡದಲ್ಲಿ ಸೇರಿಸಿಕೊಂಡಿದೆ. ಹಸನ್ 2016ರ ಜುಲೈನಲ್ಲಿ ಕೊನೆಯ ಬಾರಿ ಆಡಿದ್ದರು. 32 ಏಕದಿನ ಪಂದ್ಯಗಳನ್ನು ಆಡಿರುವ ಹಸನ್ 4 ವರ್ಷಗಳ ಹಿಂದೆ ಆಸ್ಟ್ರೇಲಿಯ -ನ್ಯೂಝಿಲ್ಯಾಂಡ್ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದ ಅಫ್ಘಾನ್ ತಂಡದಲ್ಲಿದ್ದರು.

►ವೆಸ್ಟ್‌ಇಂಡೀಸ್‌

ವೆಸ್ಟ್‌ಇಂಡೀಸ್‌ನ 15 ಸದಸ್ಯರನ್ನು ಒಳಗೊಂಡ ವಿಶ್ವಕಪ್ ತಂಡವನ್ನು ಜೇಸನ್ ಹೋಲ್ಡರ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಹೊಡಿಬಡಿ ದಾಂಡಿಗ ಕ್ರಿಸ್ ಗೇಲ್(39 ವರ್ಷ)ಐದನೇ ವಿಶ್ವಕಪ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.

►ಇಂಗ್ಲೆಂಡ್

ಶ್ರೀಲಂಕಾ: ಶ್ರೀಲಂಕಾ ತಂಡ ಸ್ಟಾರ್ ಆಟಗಾರರಾದ ಮಾಜಿ ನಾಯಕ ದಿನೇಶ್ ಚಾಂಡಿಮಾಲ್, ಬ್ಯಾಟ್ಸ್ ಮನ್ ಲಹಿರು ತಿರಿಮನ್ನೆ ಅವರನ್ನು ಕೈಬಿಟ್ಟು ಲೆಗ್ ಸ್ಪಿನ್ನರ್ ಜೆಫ್ರೆ ವಂಡರ್ಸೆಗೆ ಅವಕಾಶ ನೀಡಿದೆ. 2015ರ ಮಾರ್ಚ್‌ನಲ್ಲಿ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದ ಎಡಗೈ ದಾಂಡಿಗ ಡಿಮುತ್ ಕರುಣರತ್ನೆ ನಾಯಕನಾಗಿ ಆಯ್ಕೆಯಾಗಿದ್ದಾರೆ.

►ಬಾಂಗ್ಲಾದೇಶ

ಬಾಂಗ್ಲಾದೇಶ ತನ್ನ ವಿಶ್ವಕಪ್ ತಂಡದಲ್ಲಿ ಬ್ಯಾಟ್ಸ್ ಮನ್ ಮೊಸಾಡೆಕ್ ಹುಸೈನ್ ಹಾಗೂ ಹೊಸ ಮುಖ, ವೇಗದ ಬೌಲರ್ ಅಬು ಜಾವೆದ್‌ಗೆ ಅವಕಾಶ ನೀಡಿದೆ. ನಾಯಕ ಮಶ್ರಾಫೆ ಮೊರ್ತಝಾ, ತಮೀಮ್ ಇಕ್ಬಾಲ್, ಶಾಕಿಬ್ ಅಲ್ ಹಸನ್ ಹಾಗೂ ಮುಶ್ಫಿಕುರ್ರಹೀಂಗೆ ಮೂರು ವಿಶ್ವಕಪ್‌ಗಳಲ್ಲಿ ಆಡಿದ ಅನುಭವವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News