ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ತಪ್ಪು: ಶಶಿ ತರೂರ್

Update: 2019-05-20 05:53 GMT

ಹೊಸದಿಲ್ಲಿ, ಮೇ 20: ಎನ್‌ಡಿಎ ಮೈತ್ರಿಕೂಟ ಭಾರೀ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ರವಿವಾರ ಚುನಾವಣೋತ್ತರ ಸಮೀಕ್ಷೆಗಳು ಬೆಟ್ಟು ಮಾಡಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಈ ಸಮೀಕ್ಷೆಗಳು ಕೂಡ ಸಂಪೂರ್ಣ ತಪ್ಪಾಗಿ ಮಾರ್ಪಡಬಹುದು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಆಸ್ಟ್ರೇಲಿಯದ ಚುನಾವಣೋತ್ತರ ಸಮೀಕ್ಷೆಯ ಉದಾಹರಣೆಯನ್ನೂ ನೀಡಿದ್ದಾರೆ.

‘‘ನನ್ನ ಪ್ರಕಾರ ಚುನಾವಣೋತ್ತರ ಸಮೀಕ್ಷೆಗಳು ತಪ್ಪು. ಕಳೆದ ವಾರ ಆಸ್ಟ್ರೇಲಿಯದಲ್ಲಿ 56 ವಿವಿಧ ಎಕ್ಸಿಟ್‌ಪೋಲ್‌ಗಳ ಸಮೀಕ್ಷೆ ತಪ್ಪೆಂದು ಸಾಬೀತಾಗಿದೆ. ಭಾರತದಲ್ಲಿ ಹೆಚ್ಚಿನ ಜನರು ಚುನಾವಣೋತ್ತರ ಸಮೀಕ್ಷೆ ನಡೆಸುವವರಿಗೆ ಸತ್ಯ ಹೇಳುವುದಿಲ್ಲ. ಇದಕ್ಕೆ ಕಾರಣ ಸಮೀಕ್ಷೆ ನಡೆಸುವವರು ಸರಕಾರಿ ಅಧಿಕಾರಿಗಳೆಂಬ ಎಂಬ ಭಯ. ನಾವು 23ನೇ ತಾರೀಖಿನ ತನಕ, ನಿಜವಾದ ಫಲಿತಾಂಶ ಬರುವ ತನಕ ಕಾಯಲೇ ಬೇಕು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News