ವಿಮಾನದಲ್ಲಿ ಗದ್ದಲವನ್ನುಂಟು ಮಾಡಿದ ಮಾಜಿ ಕ್ರಿಕೆಟಿಗ ವಿಮಾನದಿಂದ ಹೊರಕ್ಕೆ

Update: 2019-05-21 17:32 GMT
ಫೋಟೋ ಕೃಪೆ : AFP

ಸಿಡ್ನಿ, ಮೇ 21: ವಿಮಾನದಲ್ಲಿ ಗದ್ದಲವನ್ನುಂಟು ಮಾಡಿದ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ದಾಂಡಿಗ ಮಿಚೆಲ್ ಸ್ಲಾಟೆರ್‌ನ್ನು ವಿಮಾನದಿಂದ ಹೊರದಬ್ಬಿದ ಘಟನೆ ವರದಿಯಾಗಿದೆ.

ಸ್ಲಾಟೆರ್ ಸಿಡ್ನಿಯಿಂದ ವಾಗ್ಗಾಕ್ಕೆ ರವಿವಾರ ವಿಮಾನದಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ವಾಗ್ವಾದ ನಡೆಸಿದರು. ಇದರಿಂದಾಗಿ ವಿಮಾನ ಅರ್ಧಗಂಟೆ ತಡವಾಗಿ ಹೊರಟಿತು ಎನ್ನಲಾಗಿದೆ.

ಸ್ಲಾಟೆರ್ ಟಾಯ್ಲೆಟ್‌ನಲ್ಲಿ ಬಾಗಿಲು ಹಾಕಿಕೊಂಡು ಬೊಬ್ಬೆ ಹೊಡೆಯುತ್ತಿದ್ದಾಗ ಭದ್ರತಾ ಸಿಬ್ಬಂದಿ ಆಗಮಿಸಿ ಅವರನ್ನು ಹೊರ ಕರೆ ತಂದರು ಎನ್ನಲಾಗಿದೆ. ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ಸ್ಲಾಟೆರ್‌ನ್ನು ವಿಮಾನದಿಂದ ಹೊರಗೆ ಕಳುಹಿಸಲಾಯಿತು. ಈ ಘಟನೆಯ ಬಗ್ಗೆ ಸ್ಲಾಟರ್ ಕ್ಷಮೆ ಯಾಚಿಸಿದ್ದಾರೆ.

1993ರಿಂದ2001ರ ತನಕ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ನಿವೃತ್ತಿಯ ಮೊದಲು 74 ಟೆಸ್ಟ್‌ಗಳಲ್ಲಿ ಆಡಿದ್ದರು. ಉತ್ತಮ ಟಿವಿ ವೀಕ್ಷಕ ವಿವರಣೆಗಾರನಾಗಿರುವ ಅವರು ಮುಂಬರುವ ವಿಶ್ವಕಪ್‌ಗೆ ವೀಕ್ಷಕ ವಿವರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News