ನೀವು ಯಾವಾಗಲೂ ನನ್ನ ಹೀರೋ: ಪ್ರಿಯಾಂಕಾ ಗಾಂಧಿ

Update: 2019-05-21 16:51 GMT

ಹೊಸದಿಲ್ಲಿ, ಮೇ 21: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆಯ ದಿನವಾದ ಮಂಗಳವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶ್ರದ್ಧಾಂಜಲಿ ಸಲ್ಲಿಸಿದರು.

ರಾಜೀವ್ ಗಾಂಧಿಯನ್ನು ಅಪ್ಪಿಕೊಳ್ಳುತ್ತಿರುವ ಭಾವಚಿತ್ರವೊಂದನ್ನು ಅವರು ಶೇರ್ ಮಾಡಿದ್ದಾರೆ. ಈ ಭಾವಚಿತ್ರದೊಂದಿಗೆ ಹರಿವಂಶ ರಾಯ್ ಬಚ್ಚನ್ ಅವರ ಜನಪ್ರಿಯ ಕವನ ‘ಅಗ್ನಿಪಥ’ದ ಕೆಲವು ಪ್ಯಾರಾಗಳನ್ನು ಹಂಚಿಕೊಂಡಿದ್ದಾರೆ. ಭಾವಚಿತ್ರದೊಂದಿಗೆ ‘‘ನೀವು ಯಾವಾಗಲೂ ನನ್ನ ಹೀರೋ’’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಬರೆದಿದ್ದಾರೆ.

 ಇದಕ್ಕೂ ಮುನ್ನ ಇಲ್ಲಿನ ವೀರಭೂಮಿಯಲ್ಲಿರುವ ರಾಜೀವ್ ಗಾಂಧಿ ಸಮಾಧಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ನನ್ನ ತಂದೆ ಸಂಭಾವಿತರು, ಪ್ರೀತಿ ಹಾಗೂ ಕರುಣೆ ಇರುವವರು. ಎಲ್ಲರಿಗೂ ಪ್ರೀತಿ, ಗೌರವ ನೀಡುವುದನ್ನು ಅವರು ನನಗೆ ಕಲಿಸಿಕೊಟ್ಟರು. ಅವರು ದ್ವೇಷಿಸಲು ಹೇಳಿ ಕೊಟ್ಟಿಲ್ಲ. ಅವರು ಪುಣ್ಯ ಸ್ಮರಣೆಯ ದಿನವಾದ ಇಂದು, ನಾನು ನನ್ನ ತಂದೆಯನ್ನು ಪ್ರೀತಿ ಹಾಗೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

‘‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ದಿನವಾದ ಇಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News