ಬೆಳಗಾವಿಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಡಾ.ವಿಶಾಲ್

Update: 2019-05-21 16:37 GMT

ಬೆಳಗಾವಿ, ಮೇ 21: ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯು ಮೇ 23 ರಂದು ಬೆಳಗ್ಗೆ 8 ಗಂಟೆಯಿಂದ ನಗರದ ಟಿಳಕವಾಡಿಯ ಆರ್.ಪಿ.ಡಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ತಿಳಿಸಿದ್ದಾರೆ.

ಬೆಳಗಾವಿ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರವಾರು ಮತ ಎಣಿಕೆಯು ಆರ್.ಪಿ.ಡಿ ಕಾಲೇಜಿನ ಲ್ಯಾಬೋರೇಟರಿ ಬಿಲ್ಡಿಂಗ್ ಹಾಗೂ ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಅರಭಾವಿ ಮತ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯು ಹಾಲ್ ನಂ.14, ಗೋಕಾಕ ಮತಕ್ಷೇತ್ರ ಹಾಲ್ ನಂ.12, ಬೆಳಗಾವಿ ಉತ್ತರ ಮತಕ್ಷೇತ್ರ ಹಾಲ್ ನಂ.22, ಬೆಳಗಾವಿ ದಕ್ಷಿಣ ಮತಕ್ಷೇತ್ರ ಹಾಲ್ ನಂ.33, ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಹಾಲ್ ನಂ.6, ಬೈಲಹೊಂಗಲ ಮತಕ್ಷೇತ್ರ ಹಾಲ್ ನಂ.20ರಲ್ಲಿ ನಡೆಯಲಿದೆ.

ಸವದತ್ತಿ ಯಲ್ಲಮ್ಮ ಮತಕ್ಷೇತ್ರ ಹಾಲ್ ನಂ.30, ಹೊಸ ಕಟ್ಟಡದಲ್ಲಿನ ಕೆಳ ಮಹಡಿಯ ಹಾಲ್ ನಂ.1ರಲ್ಲಿ ರಾಮದುರ್ಗ ಮತಕ್ಷೇತ್ರದ ಮತಗಳ ಎಣಿಕೆ ಕಾರ್ಯ ಜರುಗಲಿದೆ. ಅದರಂತೆ ಅಂಚೆ ಮತಗಳ ಎಣಿಕೆ ಪ್ರಕ್ರಿಯೆಯು ಡಾ.ಹೆರಕೇರ್ ಕಟ್ಟಡದಲ್ಲಿನ ಹಾಲ್ ನಂ.37ರಲ್ಲಿ ನಡೆಯಲಿದೆ.

ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಮತಕ್ಷೇತ್ರವಾರು ಪ್ರತಿ ಒಂದು ಮತ ಎಣಿಕೆ ಹಾಲ್‌ಗಳಿಗೆ 14 ಟೇಬಲ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿಯೊಂದು ಟೇಬಲ್‌ಗಳಿಗೆ ಒಬ್ಬರಂತೆ 14 ಏಜೆಂಟರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News