ಬಾಗಲಕೋಟೆ: ನಾಲ್ಕನೇ ಬಾರಿ ಲೋಕ ಗದ್ದುಗೆ ಏರಿದ ಗದ್ದಿಗೌಡರ್

Update: 2019-05-23 18:31 GMT

ಬಾಗಲಕೋಟೆ, ಮೇ 23: ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದೀಗೌಡರ್ 1,68187 ಅಂತರ ಮತದಿಂದ ಗೆಲುವು ಸಾಧಿಸಿ ನಾಲ್ಕನೆಯ ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ.

ಗದ್ದಿಗೌಡರ್ ಕಾಂಗ್ರೆಸ್ ಅಭ್ಯರ್ಥಿಯಾದ ವೀಣಾ ಕಾಶಪ್ಪನವರ ವಿರುದ್ಧ 1,68187 ಅಂತರದಿಂದ ಜಯ ಗಳಿಸಿದ್ದಾರೆ. ಪಡೆದಿದ್ದಾರೆ. ಗದ್ದಿಗೌಡರ್ 6,64,638 ಮತ ಪಡೆದರೆ, ವೀಣಾ ಕಾಶಪ್ಪನವರ 496451 ಮತ ಪಡೆದು ಸೋತಿದ್ದಾರೆ. ಮೂಲತಃ ಬಾಗಲಕೋಟೆ ಸದ್ಯ ಬಿಜೆಪಿ ಭದ್ರಕೋಟೆ ಎನಿಸಿದ್ದು, ಎಲ್ಲಿ ನೋಡಿದರೂ ಮೋದಿ ಅಲೆ ಮೂಡಿತ್ತು. ಪ್ರಬಲ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದ ಪಿ.ಸಿ ಗದ್ದಿಗೌಡರ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಎಲ್ಲ ಸಮುದಾಯದವರ ಜೊತೆ ಕೋಮು ಸೌಹಾರ್ದತೆಯಿಂದ ನಡೆದುಕೊಂಡು ಬಂದಿದ್ದಾರೆ. ಸತತ ಮೂರು ಬಾರಿ ಸಂಸದರಾಗಿರುವ ಮೂಲಕ ಹ್ಯಾಟ್ರಿಕ್ ಹೀರೋ ಎಂಬ ಖ್ಯಾತಿ ಪಡೆದಿದ್ದಾರೆ. ಜಮಖಂಡಿ ಭಾಗದ ಗಾಣಿಗರು ಪಕ್ಷ ನಿಷ್ಠೆಗಿಂತ ಸಮುದಾಯಕ್ಕೆ ನಿಷ್ಠೆಯನ್ನು ತೋರಿ ಗದ್ದಿಗೌಡರಿಗೆ ಮತ ಹಾಕಿದ್ದಾರೆ.

ಬಾಗಲಕೋಟೆ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಜನ ಬಿಜೆಪಿ ಶಾಸಕರಿರೋದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದೆ. ಗದ್ದಿಗೌಡರ್ ಪರ ಮೋದಿ ಎಪ್ರಿಲ್ 18ರಂದು ಬಾಗಲಕೋಟೆಗೆ ಆಗಮಿಸಿ, ಪಕ್ಷದ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News