ಕಲಬುರಗಿ: ಶಿಷ್ಯನ ವಿರುದ್ಧವೇ ಸೋತ ‘ಸೋಲಿಲ್ಲದ ಸರದಾರ'!

Update: 2019-05-24 06:19 GMT

ಕಲಬುರಗಿ, ಮೇ 24: ಸತತ ಹನ್ನೊಂದು ಬಾರಿ ಗೆಲುವಿನ ನಗೆ ಬೀರುತ್ತಾ ಸೋಲಿಲ್ಲದ ಸರದಾರನೆಂಬ ಖ್ಯಾತಿಗೊಳಗಾಗಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತನ್ನ ಶಿಷ್ಯನ ವಿರುದ್ಧವೇ ಆಘಾತಕಾರಿ ಸೋಲುಂಡಿದ್ದಾರೆ.

 ಡಝನ್ ಬಾರಿ ಗೆಲುವು ಸಾಧಿಸಲು ಉತ್ಸುಕರಾಗಿದ್ದ ಖರ್ಗೆಗೆ ತನ್ನ ಶಿಷ್ಯ ಬಿಜೆಪಿ ಅಭ್ಯರ್ಥಿ ಡಾ ಉಮೇಶ್ ಜಾಧವ್ ಬ್ರೇಕ್ ಹಾಕಿದ್ದಾರೆ. ಜಾಧವ್ ಗೆಲುವಿನ ಅಂತರ 95,190 ಮತಗಳು.

ಇಲ್ಲಿ ಡಾ.ಉಮೇಶ್ ಜಾಧವ್ ಗಳಿಸಿದ ಮತಗಳು 6,15,916. ಮಲ್ಲಿಕಾರ್ಜುನ ಖರ್ಗೆ ಪಡೆದ ಮತಗಳು 5,20,726

 ವಿಧಾನಸಭಾ ವಾರು ಮತ ವಿವರ ಇಂತಿವೆ.

1) ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ

ಬಿಜೆಪಿ – 64,010

ಕಾಂಗ್ರೆಸ್ – 90,402

ಉತ್ತರದಲ್ಲಿ 26,392 ಮತಗಳಿಂದ ಕಾಂಗ್ರೆಸ್ ಮುನ್ನಡೆ

2) ಅಫ್ಝಲ್ ಪುರ ವಿಧಾನಸಭಾ ಕ್ಷೇತ್ರ

ಬಿಜೆಪಿ – 84,829

ಕಾಂಗ್ರೆಸ್ -49,154

ಬಿಜೆಪಿ 35,675 ಮತಗಳ ಮುನ್ನಡೆ

3) ಜೇವರ್ಗಿ ವಿಧಾನಸಭಾ ಕ್ಷೇತ್ರ

ಬಿಜೆಪಿ – 82,397

ಕಾಂಗ್ರೆಸ್ -58,089

ಬಿಜೆಪಿ 24,308  ಮತಗಳ ಮುನ್ನಡೆ

4) ಚಿತ್ತಾಪುರ ವಿಧಾನಸಭಾ ಕ್ಷೇತ್ರ

ಬಿಜೆಪಿ – 70,325

ಕಾಂಗ್ರೆಸ್ -64,960

ಬಿಜೆಪಿ 5,365 ಮುನ್ನಡೆ

5) ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರ

ಬಿಜೆಪಿ – 82,417

ಕಾಂಗ್ರೆಸ್ -61,819

ಬಿಜೆಪಿ 20,598 ಮತಗಳ ಮುನ್ನಡೆ

6) ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ

ಬಿಜೆಪಿ – 84,578

ಕಾಂಗ್ರೆಸ್ -63,748

ಬಿಜೆಪಿ 20,830 ಮತಗಳ ಮುನ್ನಡೆ

7) ಸೇಡಂ ವಿಧಾನಸಭಾ ಕ್ಷೇತ್ರ

ಬಿಜೆಪಿ – 68,676

ಕಾಂಗ್ರೆಸ್ -73,753

ಕಾಂಗ್ರೆಸ್ – 5,077 ಮತಗಳ ಮುನ್ನಡೆ

8) ಗುರುಮಿಠಕಲ್ ವಿಧಾನಸಭಾ ಕ್ಷೇತ್ರ

ಬಿಜೆಪಿ – 78,684

ಕಾಂಗ್ರೆಸ್ -58,801

ಬಿಜೆಪಿ 19,883 ಮತಗಳ ಮುನ್ನಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News