ಅಡ್ವಾಣಿ- ಜೋಶಿ ಭೇಟಿಯಾದ ಪ್ರಧಾನಿ ಮೋದಿ

Update: 2019-05-24 07:09 GMT

ಹೊಸದಿಲ್ಲಿ, ಮೇ 24: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಗಳಿಸಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರು ಇಂದು ಬೆಳಗ್ಗೆ ಮಾಜಿ ಪ್ರಧಾನಿ ಎಲ್ ಕೆ ಅಡ್ವಾಣಿ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಮುರಳಿಮನೋಹರ‍್ ಜೋಶಿ ಅವರನ್ನು ಭೇಟಿಯಾದರು.
ಮೊದಲು ಅಡ್ವಾಣಿ ಮನೆಗೆ ತೆರಳಿದ ಮೋದಿ ಅವರ ಅಶೀರ್ವಾದ ಪಡೆದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ  ಅವರು ಪ್ರಧಾನಿ ಮೋದಿ ಜೊತೆಗಿದ್ದರು.
ಅಡ್ವಾಣಿ ಅವರು ಮೋದಿಗೆ ಶಾಲು ಹೊದಿಸಿ ಅಭಿನಂದಿಸಿದರು. ಬಳಿಕ  ಮೋದಿ ಮತ್ತು ಶಾ ಅವರು ಜೋಶಿ ಮನೆಗೆ ತೆರಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News