ಬಿಜೆಪಿ ಗೆಲುವಿಗೆ ‘ಪುಲ್ವಾಮ’ ಕಾರಣ: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-05-27 12:03 GMT

ಬೆಂಗಳೂರು, ಮೇ 27: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಹುದ್ದೆಗೆ ಈ ಹಿಂದೆ ನನಗೆ ಅವಕಾಶ ಬಂದಿತ್ತು. ಆದರೆ, ನಾನು ನಿರಾಕರಿಸಿದ್ದೆ. ಇದೀಗ ಆ ಹುದ್ದೆ ಖಾಲಿ ಇಲ್ಲ. ಹೀಗಿರುವಾಗ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಹೀಗಾಗಿ ಊಹಾಪೋಹದ ಸುದ್ದಿಗೆ ನಾನು ಉತ್ತರಿಸಲಾರೆ ಎಂದು ನಿರಾಕರಿಸಿದರು.

ಬಿಜೆಪಿ ಗೆಲುವಿಗೆ ‘ಪುಲ್ವಾಮ’ ಕಾರಣ: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ವ್ಯತ್ಯಾಸವಿದೆ. ಪುಲ್ವಾಮ ದಾಳಿ ಸೇರಿ ಇತರ ವಿಷಯಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಶಸ್ವಿಗೆ ಕಾರಣವಾಗಿವೆ ಎಂದು ಪಾಟೀಲ್ ಇದೇ ವೇಳೆ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಸೋಲಿಗೆ ಯಾವುದೇ ಕಾರಣಗಳಿರಬಹುದು. ಆದರೆ, ಜನರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜಸ್ಥಾನ ಸೇರಿ ಇತರ ಕಡೆಗಳಲ್ಲೂ ಸೋಲಾಗಿದೆ. ಆದರೆ, ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಪಾಟೀಲ್ ತಿಳಿಸಿದರು.

ಎಸ್ಸೆಂ ಕೃಷ್ಣ ಹಿರಿಯ ನಾಯಕರು. ರಮೇಶ್ ಜಾರಕಿಹೊಳಿ, ಸುಧಾಕರ್ ಅವರು ರಾಜಕೀಯ ಹೊರತುಪಡಿಸಿ ಅವರನ್ನು ಭೇಟಿ ಮಾಡಿದ್ದಾರೆ. ನನಗೂ ಕೃಷ್ಣ ಅವರು ಕರೆ ಮಾಡಿ ಮಾತನಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಲು ಸಾಧ್ಯವಿಲ್ಲ ಎಂದು ಅವರು ವಿವರಣೆ ನೀಡಿದರು.

‘ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಬಿಜೆಪಿಯವರಿಗೆ ಹೊಸ ಹುರುಪು ಬಂದಿದೆ. ಅವರು ಆಪರೇಷನ್ ಕಮಲಕ್ಕೆ ವರ್ಷದಿಂದಲೂ ಪ್ರಯತ್ನ ಮಾಡುತ್ತಲೇ ಇದ್ದಾರೆ. ಮೈತ್ರಿ ಸರಕಾರ ಮುಂದುವರಿಯಲಿದ್ದು, ನಾವು ಆರೋಗ್ಯವಾಗಿದ್ದು. ನಮಗೇಕೆ ಆಪರೇಷನ್ ?

-ಆರ್.ವಿ.ದೇಶಪಾಂಡೆ ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News