ನೂತನ ಸರಕಾರದಲ್ಲಿ ಯಾವುದೇ ಜವಾಬ್ದಾರಿ ನನಗೆ ಬೇಡ: ಮೋದಿಗೆ ಜೇಟ್ಲಿ ಪತ್ರ

Update: 2019-05-29 08:27 GMT

ಹೊಸದಿಲ್ಲಿ, ಮೇ 29: ತನ್ನ ಆರೋಗ್ಯದ ಕಾರಣ ಹೊಸ ಸರಕಾರದಲ್ಲಿ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರುಣ್ ಜೇಟ್ಲಿಯವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ತಾನು ಬರೆದ ಪತ್ರದ ಫೋಟೊವನ್ನು ಜೇಟ್ಲಿ ಟ್ವೀಟ್ ಮಾಡಿದ್ದಾರೆ. “ನನಗಾಗಿ ನನ್ನ ಚಿಕಿತ್ಸೆ ಮತ್ತು ಆರೋಗ್ಯಕ್ಕಾಗಿ ಸಮಯ ಮೀಸಲಿರಿಸಬೇಕಾಗಿದೆ. ಆದ್ದರಿಂದ ಹೊಸ ಸರಕಾರದಲ್ಲಿ ಯಾವುದೇ ಜವಾಬ್ದಾರಿ ನೀಡದಂತೆ ಈ ಪತ್ರ ಬರೆಯುತ್ತಿದ್ದೇನೆ” ಎಂದು ಜೇಟ್ಲಿ  ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News