ರಶ್ಯ ಅಧ್ಯಕ್ಷ ಪುಟಿನ್‌ಗೆ ಅವಳಿ-ಜವಳಿ ಮಕ್ಕಳು?

Update: 2019-05-29 18:44 GMT

ಮಾಸ್ಕೋ, ಮೇ 29: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಪ್ರಿಯತಮೆ ಎಂದು ಹೇಳಲಾದ ಮಹಿಳೆಯೊಬ್ಬರು ಈ ತಿಂಗಳ ಆದಿ ಭಾಗದಲ್ಲಿ ಅವಳಿ-ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬುದಾಗಿ ವರದಿಯಾಗಿದೆ.

 ಒಲಿಂಪಿಕ್ ಚಿನ್ನ ವಿಜೇತೆ ರಿದ್ಮಿಕ್ ಜಿಮ್ನಾಸ್ಟ್ 36 ವರ್ಷದ ಅಲೀನಾ ಕಬಯೇವ ಅವರು ಪುಟಿನ್‌ರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂಬ ಊಹಾಪೋಹಗಳು ತುಂಬಾ ಹಿಂದಿನಿಂದಲೂ ಇವೆ ಎಂಬುದಾಗಿ ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

ಕುಲಕೊವ್ ಹೆರಿಗೆ ಸಂಶೋಧನಾ ಕೇಂದ್ರದ ಇಡೀ ವಿಐಪಿ ಮಹಡಿಯನ್ನು ಈ ತಿಂಗಳು ತೆರವುಗೊಳಿಸಲಾಗಿತ್ತು ಹಾಗೂ ಇದಕ್ಕೆ ಕಬಯೇವ ಕಾರಣ ಎಂಬುದಾಗಿ ರಶ್ಯದ ಪತ್ರಿಕೆ ‘ಮೊಸ್ಕೊವ್‌ಸ್ಕಿ ಕೊಮ್ಸಿಮೊಲಿಟ್ಸ್’ ಹೇಳಿದೆ. ಆದರೆ, ಈ ಸುದ್ದಿಯನ್ನು ಬಳಿಕ ತೆಗೆದುಹಾಕಲಾಗಿದೆ.

ಆದರೆ, ಕಬಯೇವ ಜೊತೆಗೆ ತಾನು ಪ್ರೇಮ ಸಂಬಂಧ ಹೊಂದಿದ್ದೇನೆ ಎಂಬ ವರದಿಗಳನ್ನು ಪುಟಿನ್ ತುಂಬಾ ಹಿಂದಿನಿಂದಲೂ ನಿರಾಕರಿಸುತ್ತಲೇ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News