ವಿರಾಜಪೇಟೆ: ಮನೆಗೆ ಮರಬಿದ್ದು ಗೃಹಿಣಿ ಮೃತ್ಯು

Update: 2019-05-31 14:48 GMT

ಮಡಿಕೇರಿ ಮೇ 31 :ಗಾಳಿಮಳೆಗೆ ಮನೆ ಮೇಲೆ ಮರ ಬಿದ್ದು ಗೃಹಿಣಿ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ದೇವರಪುರ ಗ್ರಾಮದ ತಾರಿಕಟ್ಟೆ ಎಂಬಲ್ಲಿ ನಡೆದಿದೆ. ಗ್ರಾಮದ ನಿವಾಸಿ ನೌಶಾದ್ ಎಂಬವರ ಪತ್ನಿ ರೈಹಾನತ್ (23) ಮೃತ ಮಹಿಳೆ. ರೈಹಾನತ್ ಅವರ ಪತಿ ನೌಶಾದ್ (30) ಅವರಿಗೆ ಗಾಯವಾಗಿದ್ದು, ಇವರ ಪುತ್ರ ನಸಲ್(1) ಅಪಾಯದಿಂದ ಪಾರಾಗಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀೀಲ್ದಾರ್ ಗೋವಿಂದರಾಜು ಪರಿಶೀಲನೆ ನಡೆಸಿ, ಮೃತರ ಕುಟುಂಬಕ್ಕೆ ಪ್ರಕೃತಿ ವಿಕೋಪದ ನಿಧಿಯಿಂದ 5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಜಖಂ ಆಗಿರುವ ಮನೆಗೆ 5 ಲಕ್ಷ ಪರಿಹಾರವನ್ನು ಪ್ರತ್ಯೇಕವಾಗಿ ನೀಡುವಂತೆ ಕುಟುಂಬಸ್ಥರು ಒತ್ತಾಯಿಸಿದರು.

ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗಾಳಿ, ಮಳೆಗೆ ಮುರಿದು ಬಿದ್ದ ರೆಂಬೆ ನೌಶಾದ್ ಅವರ ಮನೆಯ ಮೇಲೆ ಬಿದ್ದು ಈ ಘಟನೆ ಸಂಭವಿಸಿದೆ. ಮಲಗಿದ್ದವರ ಮೇಲೆ ರೆಂಬೆ ಬಿದ್ದು, ರೈಹಾನತ್ ಅವರು ಸ್ಥಳದಲ್ಲಿಯೇ ಸಾವನಪ್ಪಿದರು. ನೌಶಾದ್ ಅವರ ಬಲಗೈಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಜೊತೆಯಲ್ಲಿದ್ದ ಮಗು ಕೂಡ ಅದೃಷ್ಠವಶಾತ್ ಪಾರಾಗಿದೆ.

ಸ್ಥಳಕ್ಕೆ ತಹಸೀಲ್ದಾರ್ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ತಾ. ಪಂ ಇಒ ಜಯಣ್ಣ, ಕಂದಾಯ ನಿರೀಕ್ಷಕ ರಾಧಾಕೃಷ್ಣ ಉಪಸ್ಥಿತರಿದ್ದರು. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿರಾಜಪೇಟೆಯಲ್ಲಿ ಅನಾಹುತ:
ವಿರಾಜಪೇಟೆ ಪಟ್ಟಣದಲ್ಲಿ ಗಾಳಿ, ಮಳೆಗೆ ಬೃಹತ್ ಗಾತ್ರದ ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ನಡೆದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಲಬಾರ್ ರಸ್ತೆಯ ಮಿನುಪೇಟೆಯಲ್ಲೂ ಮರ ರಸ್ತೆಗುರುಳಿತು. ಸ್ಥಳೀಯರ ನೆರವಿನಿಂದ ಸರ್ಕಾರಿ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದರು. ಚಿಕ್ಕಪೇಟೆಯಲ್ಲಿ ಮರದ ಕೊಂಬೆ ಬಿದ್ದು, ಕಾರು ಸಂಪೂರ್ಣ ಜಖಂಗೊಂಡ ಘಟನೆಯೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News