ತುಮಕೂರು: ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲಿ ಅತಿ ಹೆಚ್ಚು ಸ್ಥಾನ ಪಡೆದ ಕಾಂಗ್ರೆಸ್

Update: 2019-05-31 18:49 GMT

ತುಮಕೂರು,ಮೇ.31:ತುಮಕೂರು ಜಿಲ್ಲೆಯ 2 ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಮತ್ತು ಒಂದು ನಗರಸಭೆಗೆಯ ಹಾಗೂ ತುಮಕೂರು ನಗರದ 22ನೇ ವಾರ್ಡಿನ ಉಪಚುನಾವಣೆ ಸೇರಿದಂತೆ 91 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 45,ಬಿಜೆಪಿ 21 ಹಾಗೂ ಜೆಡಿಎಸ್ 15 ಸ್ಥಾನಗಳಲ್ಲಿ ಜಯಗಳಿಸಿದ್ದು, 10 ಕ್ಷೇತ್ರಗಳಲ್ಲಿ ಪಕ್ಷೇತರರ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಶಾಸಕರಿರುವ ಕುಣಿಗಲ್ ಮತ್ತು ಪಾವಗಡ ಪುರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿದರೆ, ಬಿಜೆಪಿ ಶಾಸಕರಿರುವ ತುರುವೇಕೆರೆ ಪಟ್ಟಣ ಪಂಚಾಯಿತಿ ಮತ್ತು ತಿಪಟೂರು ನಗರಸಭೆಯಲ್ಲಿ ಆತಂತ್ರ ಸ್ಥಿತಿಗೆ ತಲುಪಿದೆ.ತುರುವೇಕೆರೆಯಲ್ಲಿ ಬಿಜೆಪಿ 06,ಜೆಡಿಎಸ್ 05,ಕಾಂಗ್ರೆಸ್ 2 ಸ್ಥಾನ ಗಳಿಸಿದರೆ,ಓರ್ವ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ತಿಪಟೂರು ನಗರಸಭೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 09,ಮತ್ತು ಜೆಡಿಎಸ್ 05ರಲ್ಲಿ ಗೆಲುವು ಸಾಧಿಸಿದರೆ, ಪಕ್ಷೇತರರು 6 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಪಾವಗಡ ಪುರಸಭೆಯಲ್ಲಿ ಕಾಂಗ್ರೆಸ್ 20, ಜೆಡಿಸ್ 02ರಲ್ಲಿ ಗೆಲುವು ಸಾಧಿಸಿದರೆ, ಓರ್ವ ಪಕ್ಷೇತರರು ವಿಜೇತರಾಗಿದ್ದು, ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ.
ಕಾಂಗ್ರೆಸ್‍ನ ಸಂಸದರು ಮತ್ತು ಶಾಸಕರಿರುವ ಕುಣಿಗಲ್ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 04ರಲ್ಲಿ, ಜೆಡಿಎಸ್ 03 ರಲ್ಲಿ ಗೆಲುವು ಸಾಧಿಸಿದ್ದು, ಮೂವರು ಪಕ್ಷೇತರರು ವಿಜೇತರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News