ಸೋಮವಾರಪೇಟೆಯಲ್ಲಿ ರಸ್ತೆ ಅಪಘಾತ: ಮಗು ಮೃತ್ಯು, 18 ಮಂದಿಗೆ ಗಾಯ

Update: 2019-06-03 08:25 GMT

ಸೋಮವಾರಪೇಟೆ: ರಸ್ತೆ ಅಪಘಾತಕ್ಕೆ ಮಗುವೊಂದು ಮೃತಪಟ್ಟು 18 ಮಂದಿ ಗಾಯಗೊಂಡ ಘಟನೆ ಕೋವರ್‌ಕೊಲ್ಲಿ ತಿರುವಿನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬೆಳಗಾಮ್ ಮೂಲದ ತೀರ್ಥಯಾತ್ರೆ ತಂಡದ ವಾಹನ ಅಪಘಾತಕ್ಕೆ ಒಳಗಾಗಿ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದ್ದು, 9 ಮಕ್ಕಳು ಸೇರಿದಂತೆ 18 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News