ಸಿನೆಮಾದಲ್ಲಿ ಮನರಂಜನೆಯೊಂದಿಗೆ ಮೌಲ್ಯಗಳು ತುಂಬಿರಲಿ: ಸಿದ್ದರಾಮಯ್ಯ

Update: 2019-06-06 14:22 GMT

ಬೆಂಗಳೂರು, ಜೂ.6: ಸಿನೆಮಾಗೆ ಮನರಂಜನೆಯೇ ಮುಖ್ಯವಲ್ಲ. ಜೊತೆಗೆ ನೀತಿಪಾಠ, ಸಾಮಾಜಿಕ ಮೌಲ್ಯಗಳು ಹಾಸುಹೊಕ್ಕಿರಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದರು.

ಗುರುವಾರ ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸಲಗ’ ಚಿತ್ರದ ಕಥೆ ನನಗೆ ಗೊತ್ತಿಲ್ಲ. ಸಾಮಾನ್ಯವಾಗಿ ಒಂಟಿ ಸಲಗ ಅಪಾಯಕಾರಿ. ಆದರೆ, ಸಿನೆಮಾದಲ್ಲಿರುವ ಒಂಟಿ ಸಲಗ ಅಪಾಯಕಾರಿ ಆಗದಿರಲಿ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಿರಲಿ ಎಂದು ಶುಭ ಹಾರೈಸಿದ್ದಾರೆ.

ಯಾವುದೇ ಸಿನಿಮಾದ ಯಶಸ್ಸು ನಿರ್ದೇಶಕನಿಗೆ ಮೊದಲು ಸೇರುತ್ತದೆ. ಆ ಬಳಿಕ ನಟ-ನಟಿ ಹಾಗೂ ಖಳನಾಯಕರು ಬರುತ್ತಾರೆ. ನಿರ್ದೇಶಕರು ಜನರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಬೇಕು. ಸಮಾಜಕ್ಕೆ ಸಂದೇಶ ಸಾರುವಂತಹ ಸಿನಿಮಾಗಳು ಬಬೇಕು ಎಂದು ಅವರು ಹೇಳಿದರು.

ಈಗ ಸಿನೆಮಾ ನೋಡೋದನ್ನ ಕಡಿಮೆ ಮಾಡಿದ್ದೇನೆ. ವಿದ್ಯಾರ್ಥಿಯಾಗಿದ್ದಾಗ ದಿನಕ್ಕೆ ಒಂದು ಸಿನಿಮಾ ನೋಡುತ್ತಿದ್ದೆ. ಹಿಂದೆ ಇದ್ದಂತಹ ಕಥೆ-ಮೌಲ್ಯ-ನೀತಿ ಸಂದೇಶ ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News