ತನ್ನ ಪತಿಯಿದ್ದ ಐಎಎಫ್ ವಿಮಾನ ನಾಪತ್ತೆಯಾಗುವುದನ್ನು ನೋಡಿದ್ದರು ಪೈಲಟ್ ಪತ್ನಿ...

Update: 2019-06-06 17:10 GMT

ಹೊಸದಿಲ್ಲಿ, ಜೂ.6: ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ಯುದ್ಧವಿಮಾನ ಸೋಮವಾರ ಮಧ್ಯಾಹ್ನ ನಾಪತ್ತೆಯಾಗುವ ವೇಳೆ ಅದರ ಪೈಲಟ್ ಆಶಿಶ್ ತನ್ವರ್ ಪತ್ನಿ ಸಂಧ್ಯಾ ಅಸ್ಸಾಂನ ಜೊರ್ಹಟ್‌ನ ಐಎಎಫ್‌ನ ವಾಯು ಸಂಚಾರ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

 ಸಂಧ್ಯಾ ಕರ್ತವ್ಯದಲ್ಲಿದ್ದ ಜೊರ್ಹಟ್ ವಾಯುನೆಲೆಯಿಂದ ಎಎನ್-32 ಯುದ್ಧವಿಮಾನ ಸೋಮವಾರದಂದು ಮಧ್ಯಾಹ್ನ 12.25ಕ್ಕೆ ಅರುಣಾಚಲ ಪ್ರದೇಶದ ಮೆಚುಕದಲ್ಲಿರುವ ಸುಧಾರಿತ ಲ್ಯಾಂಡಿಂಗ್ ನೆಲೆಗೆ ಹಾರಾಟ ಆರಂಭಿಸಿತ್ತು. ವಿಮಾನವು ನಿಯಂತ್ರಣ ಕೊಠಡಿಯಿಂದ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಸಂಪರ್ಕ ಕಳೆದುಕೊಂಡಿದ್ದರೂ ಸಂಧ್ಯಾ ನಮಗೆ ಈ ವಿಷಯವನ್ನು ಘಟನೆ ನಡೆದ ಒಂದು ಗಂಟೆಯ ನಂತರ ತಿಳಿಸಿದ್ದಳು ಎಂದು ಆಶಿಶ್ ಅವರ ಚಿಕ್ಕಪ್ಪ ಉದಯ್‌ವೀರ್ ಸಿಂಗ್ ತಿಳಿಸಿದ್ದಾರೆ.

 ಆಶಿಶ್ ತಂದೆ ರಾಧೆಲಾಲ್‌ಗೆ ಐದು ಮಂದಿ ಸಹೋದರರಿದ್ದು ಈ ಪೈಕಿ ರಾಧೆಲಾಲ್ ಸೇರಿದಂತೆ ಐದು ಮಂದಿ ಭಾರತೀಯ ಸೇನೆ ಸೇರಿದರೆ ಒಬ್ಬರು ಮಾತ್ರ ಪಲ್ವಾಲ್‌ನಲ್ಲಿ ಶಾಲೆ ನಡೆಸುತ್ತಿದ್ದಾರೆ. ಆಶಿಶ್‌ನ ಹಿರಿಯ ಸಹೋದರಿ ಭಾರತೀಯ ವಾಯುಪಡೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News