ಹನೂರು: ದೊಡ್ಡಣೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಬೇಟಿ, ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ

Update: 2019-06-06 18:39 GMT

ಹನೂರು : ತಾಲ್ಲೂಕಿನ  ಗಡಿಭಾಗದ  ಮಲೆಮಹದೇಶ್ವರ ಬೆಟ್ಟ ಸಮೀಪದ ಕಾಡಂಚಿನಲ್ಲಿರುವ ದೊಡ್ಡಣೆ ಗ್ರಾಮಕ್ಕೆ ಗುರುವಾರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ನೇತೃತ್ವದ ತಂಡ ಬೇಟಿ ನೀಡಿ ರಸ್ತೆ, ಕುಡಿಯುವ ನೀರು, ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು ಬಳಿಕ ಅಂಗನವಾಡಿಗೆ ಭೇಟಿ ಮಕ್ಕಳ ಕುಶಲೋಪಚರಿಯನ್ನು ವಿಚಾರಿಸಿ ಕುಂದು ಕೊರೆತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ದೊಡ್ಡಣೆ ಗ್ರಾಮದಲ್ಲಿರುವ ನೀರಿನ ಹೊಂಡವನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಕುಡಿಯುವ ನೀರಿನ ಸಮಸ್ಯೆ  ಸೇರಿದಂತೆ ಗ್ರಾಮದ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಲು ಶಿಕ್ಷಕರ ನಿಯೋಜನೆ ಶಾಲೆಯಲ್ಲಿನ  ಮೂಲಭೂತ ಸೌಕರ್ಯಗಳ  ಬಗ್ಗೆ ಮಾಹಿತಿ ಪಡೆದುಕೊಂಡರು. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ತಲೆದೂರದಂತೆ ಕ್ರಮಜರುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ನಿಖಿತ ಚಿನ್ನಸ್ವಾಮಿ, ತಹಶೀಲ್ದಾರ್ ನಾಗರಾಜು ಬಿಇಒ ಟಿ.ಆರ್ ಸ್ವಾಮಿ , ಆರ್.ಐ. ನಂಜುಂಡಶೆಟ್ಟಿ, ಮಮ ಬೆಟ್ಟ ಗ್ರಾ.ಪಂ ಪಿಡಿಓ ರಾಜೇಶ್,ಗ್ರಾಮ ಲೆಕ್ಕಾಧಿಕಾರಿ ವಿನೋದ್, ಪೊನ್ನಾಚಿ ಗ್ರಾಮ ಲೆಕ್ಕಾಧಿಕಾರಿ ಶಾಂತರಾಜು, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ರವಿಕುಮಾರ್  ಸೇರಿದಂತೆ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News