ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-06-07 18:31 GMT

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

 ಟೆಲ್ ಅವೀವ್ ವಿವಿ ಸಮ್ಮರ್ ಪ್ರೋಗ್ರಾಂ ಸ್ಕಾಲರ್‌ಶಿಪ್ 2019, ಇಸ್ರೇಲ್

ವಿವರ: ಇಸ್ರೇಲ್‌ನ ಟೆಲ್ ಅವೀವ್ ವಿವಿ(ಟಿಎಯು) ಸ್ಮಾರ್ಟ್ ಸಿಟೀಸ್, ಆಹಾರ ಸುರಕ್ಷತೆ ಮತ್ತು ಭದ್ರತೆ ವಿಷಯಗಳಲ್ಲಿ ಅಧ್ಯಯನಕ್ಕಾಗಿ ಸ್ಕಾಲರ್‌ಶಿಪ್ ಘೋಷಿಸಿದೆ.

ಅರ್ಹತೆ: ಪದವಿ, ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿರುವ, ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ.80 ಅಂಕ ಗಳಿಸಿದವರು ಅರ್ಹರು.

ನೆರವು: ಅರ್ಹ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕ, ಮೆಡಿಕಲ್ ಇನ್ಷೂರೆನ್ಸ್ , ವಿದ್ಯಾರ್ಥಿ ನಿಲಯದ ವಾಸ್ತವ್ಯ ವೆಚ್ಚದ ಶೇ.65ರಷ್ಟು ಮೊತ್ತವನ್ನು ಪಾವತಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 15, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/TAU7

**************

ವಿದ್ಯಾರ್ಥಿವೇತನ

(ಆದಾಯ ಆಧಾರಿತ):

 ಎಚ್‌ಡಿಎಫ್‌ಸಿ ಬ್ಯಾಂಕ್ ಎಜುಕೇಷನಲ್ ಕ್ರೈಸಿಸ್ ಸ್ಕಾಲರ್‌ಶಿಪ್ ಸಪೋರ್ಟ್ 2019

ವಿವರ: ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಕೌಟುಂಬಿಕ ಬಿಕ್ಕಟ್ಟಿನ ಸಂತ್ರಸ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಶಾಲೆ ಬಿಡುವವರ ಪ್ರಮಾಣವನ್ನು ಕಡಿಮೆಗೊಳಿಸುವ ಉದ್ದೇಶದಿಂದ, ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ ನೀಡುವ ಸ್ಕಾಲರ್‌ಶಿಪ್ ಇದಾಗಿದೆ.

 ಅರ್ಹತೆ: 6ರಿಂದ 12ನೇ ತರಗತಿವರೆಗಿನ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಾಕ್ಟೋರಲ್ ಪದವಿ ವಿದ್ಯಾರ್ಥಿಗಳು, ಪೂರ್ಣಾವಧಿ ಅಥವಾ ಅಂಶಕಾಲಿಕ ವಿದ್ಯಾರ್ಥಿಗಳು, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಮಾನ್ಯತೆ ಪಡೆದ ವಿವಿಯಿಂದ ಪಿಎಚ್‌ಡಿ ಪಡೆದವರು ( ಕಳೆದ ಮೂರು ಅಥವಾ ಕಡಿಮೆ ವರ್ಷಗಳಿಂದ ಕೌಟುಂಬಿಕ ಬಿಕ್ಕಟ್ಟು ಎದುರಿಸುತ್ತಿರುವವರು) ಅರ್ಜಿ ಸಲ್ಲಿಸಬಹುದು

ನೆರವು: ಆಯ್ಕೆಯಾದ ಶಾಲಾ ವಿದ್ಯಾರ್ಥಿಗಳಿಗೆ 10 ಸಾವಿರ ರೂ., ವಿವಿ, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 15, 2019

ಅರ್ಜಿ: ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/HEC6

**************

ವಿದ್ಯಾರ್ಥಿವೇತನ

(ಪ್ರತಿಭೆ ಆಧಾರಿತ):

ಇಂಟರ್‌ನ್ಯಾಷನಲ್ ಎಸ್ಸೆ ಕಾಂಟೆಸ್ಟ್ ಫಾರ್ ಯಂಗ್ ಪೀಪಲ್ 2019

ವಿವರ: ಜಪಾನ್‌ನ ಜಿಒಐ ಪೀಸ್ ಫೌಂಡೇಷನ್ ಯುವ ವಿದ್ಯಾರ್ಥಿಗಳಿಂದ ಪ್ರಬಂಧಗಳನ್ನು ಆಹ್ವಾನಿಸುತ್ತದೆ. ಸಾಂಸ್ಕೃತಿಕ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿ- ಈ ವಿಷಯದಲ್ಲಿ ಪ್ರಬಂಧ ಬರೆದು ಸಲ್ಲಿಸಬೇಕು.

ಅರ್ಹತೆ: ವೈಯಕ್ತಿಕವಾಗಿ ಅಥವಾ ತಂಡವಾಗಿ ವಿದ್ಯಾರ್ಥಿಗಳು ಎರಡು ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. 14ರ ಕೆಳಹರೆಯದ ವಿದ್ಯಾರ್ಥಿಗಳು ಕಿರಿಯರ ವಿಭಾಗದಲ್ಲಿ ಮತ್ತು 15ರಿಂದ 25 ವರ್ಷದ ವಿದ್ಯಾರ್ಥಿಗಳು ಯುವ ವಿಭಾಗದಲ್ಲಿ ಭಾಗವಹಿಸಬಹುದು.

 ನೆರವು: ಮೊದಲ ಮೂರು ಸ್ಥಾನ ಪಡೆದ ಪ್ರಬಂಧಗಳಿಗೆ 1 ಲಕ್ಷ ಜಪಾನ್ ಯೆನ್ ನಗದು ಬಹುಮಾನವಿದೆ. ಮುಂದಿನ 30 ಸ್ಥಾನ ಪಡೆದ ಪ್ರಬಂಧಗಳಿಗೆ ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 15, 2019

ಅರ್ಜಿ: ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಜಾಲತಾಣ:  http://www.b4s.in/bharati/IEC8

**************

ವಿದ್ಯಾರ್ಥಿವೇತನ

(ಅರ್ಹತೆ ಮತ್ತು ಆದಾಯ ಆಧಾರಿತ):

ಉಜ್ವಲ್ ಭವಿಷ್ಯ ಸ್ಕಾಲರ್‌ಶಿಪ್ 2019-20

   ವಿವರ: ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಕುಟುಂಬದ, 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಂದ ವಿ-ಮಾರ್ಟ್ ಅರ್ಜಿ ಆಹ್ವಾನಿಸುತ್ತಿದೆ. ಉನ್ನತ ಅಧ್ಯಯನ ನಡೆಸಲು ಆರ್ಥಿಕ ಸಮಸ್ಯೆ ಇರುವವರು, ಅಥವಾ ಆರ್ಥಿಕ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸ ಮೊಟಕುಗೊಳಿಸುವ ಅನಿವಾರ್ಯತೆಗೆ ಸಿಲುಕಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

 ಅರ್ಹತೆ: 14ರಿಂದ 16 ವರ್ಷದ, 2019ರಲ್ಲಿ ಕನಿಷ್ಠ ಶೇ. 75 ಅಂಕಗಳೊಂದಿಗೆ ಎಸೆಸೆಲ್ಸಿ ಪಾಸಾಗಿರುವ, ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ. ಇರುವವರು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ತಲಾ 10 ಸಾವಿರ ರೂ. ನೀಡಲಾಗುವುದು. ಅಲ್ಲದೆ ಆಯ್ಕೆಯಾದವರಲ್ಲಿ ಕೆಲವರಿಗೆ 20 ಸಾವಿರ ರೂ. ಮೊತ್ತದ ಸ್ಕಾಲರ್‌ಶಿಪ್ ಪಡೆಯುವ ಅವಕಾಶವೂ ಇದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 30, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/UBS9

*********************

ವಿದ್ಯಾರ್ಥಿವೇತನ

(ಅರ್ಹತೆ ಮತ್ತು ಆದಾಯ ಆಧಾರಿತ):

ರಮಣಕಾಂತ್ ಮುಂಜಲ್ ಸ್ಕಾಲರ್‌ಶಿಪ್ 2019

ವಿವರ: 12ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಪದವಿ ಅಧ್ಯಯನ ಮತ್ತು ವೃತ್ತಿಪರ ಅಧ್ಯಯನ ನಡೆಸಲು ರಮಣಕಾಂತ್ ಮುಂಜಾ ಪ್ರತಿಷ್ಠಾನ ನೀಡುವ ಸ್ಕಾಲರ್‌ಶಿಪ್. ಆರ್ಥಿಕ ಮತ್ತು ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಆರ್ಥಿಕ ನೆರವು ನೀಡಲಾಗುವುದು.

ಅರ್ಹತೆ: 19 ವರ್ಷ ಮೀರದ ಭಾರತೀಯ ವಿದ್ಯಾರ್ಥಿಗಳು (2019ರ ಮೇ 31ರಂದು), ಕುಟುಂಬದ ವಾರ್ಷಿಕ ವರಮಾನ 6 ಲಕ್ಷ ರೂ.ಗಿಂತ ಕಡಿಮೆ ಇರುವವರು ಅರ್ಜಿ ಸಲ್ಲಿಸಬಹುದು. ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಕನಿಷ್ಠ ಶೇ. 65 ಅಂಕ(ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 80 ಅಂಕ) ಗಳಿಸಿರಬೇಕು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 2,70,000 ರೂ. ಮೊತ್ತದ ಸ್ಕಾಲರ್‌ಶಿಪ್ (ಪದವಿ ಅಧ್ಯಯನಕ್ಕೆ), 50,000ರೂ. (ಡಿಪ್ಲೊಮಾ ಅಧ್ಯಯನಕ್ಕೆ) ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 15, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/RKM1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News