ಬಿಜೆಪಿ ಬರ ಅಧ್ಯಯನ ರಾಜಕೀಯ ಗಿಮಿಕ್: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-06-09 14:47 GMT

ವಿಜಯಪುರ, ಜೂ.9: ನಾಳೆ ಅಥವಾ ನಾಡಿದ್ದು ಮುಂಗಾರು ಮಳೆ ನಮ್ಮ ರಾಜ್ಯಕ್ಕೆ ಪ್ರವೇಶ ಮಾಡುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಬಿಜೆಪಿಯವರು ನಡೆಸುತ್ತಿರುವ ಬರ ಅಧ್ಯಯನ ಪ್ರವಾಸವು ರಾಜಕೀಯ ಗಿಮಿಕ್ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಈಗಾಗಲೇ ಬರ ಪೀಡಿತ ಪ್ರದೇಶಳಿಗೆ ಹಲವು ಬಾರಿ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಸರಕಾರ ಮಾಡಿದೆ ಎಂಧರು.

ಬಿಜೆಪಿಯವರು ಇಷ್ಟು ದಿನ ಆಪರೇಷನ್ ಕಮಲ ಮಾಡುವುದರಲ್ಲಿ ಮಗ್ನರಾಗಿದ್ದರು. ಈಗ ಆಪರೇಷನ್ ಕಮಲ ವಿಫಲವಾಗಿದೆ. ಆದುದರಿಂದ, ಅವರಿಗೆ ಈಗ ರಾಜ್ಯದಲ್ಲಿರುವ ಬರ ಪರಿಸ್ಥಿತಿ ನೆನಪಾಗಿದೆ. ಬರ ಅಧ್ಯಯನ ಎಂಬುದು ಒಂದು ನಾಟಕ, ರಾಜಕೀಯ ಗಿಮಿಕ್ ಎಂದು ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News