ವಯಸ್ಸಾದ ಹೆತ್ತವರನ್ನು ತೊರೆಯುವ ಮಕ್ಕಳಿಗೆ ಜೈಲು ಶಿಕ್ಷೆ: ಬಿಹಾರ ಸರಕಾರದ ಮಹತ್ವದ ನಿರ್ಧಾರ

Update: 2019-06-12 06:40 GMT

 ಪಾಟ್ನಾ, ಜೂ.12: ವಯಸ್ಸಾದ ಹೆತ್ತವರನ್ನು ತೊರೆದು ಅನಾಥರನ್ನಾಗಿಸುವ ಮಕ್ಕಳಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರದ ಸಚಿವ ಸಂಪುಟ ಸಭೆ ಮಂಗಳವಾರ ಅನುಮೋದನೆ ನೀಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಬಿಹಾರ ಸರಕಾರದ ಈ ನಿರ್ಧಾರವು ಹೆತ್ತವರನ್ನು ನಿರ್ಲಕ್ಷಿಸುವ ಅಥವಾ ಕೈಬಿಡುವ ಸಮಾಜದ ಮೇಲೆ ದೂರದ ಪರಿಣಾಮಬೀರಲಿದೆ.

   ಹೆತ್ತವರನ್ನು ನಿರ್ಲಕ್ಷಿಸುವ, ಅನಾಥರನ್ನಾಗಿಸುವ ಮಗ ಹಾಗೂ ಮಗಳ ವಿರುದ್ಧ ಹೆತ್ತವರು ದೂರು ನೀಡಿದ ಬಳಿಕ ಜಾಮೀನು ರಹಿತ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ರಾಜ್ಯ ಸಮಾಜ ಕಲ್ಯಾಣ ಇಲಾಖೆ ಈ ಪ್ರಸ್ತಾವವನ್ನು ಮುಂದಿಟ್ಟಿತ್ತು.

ಬಿಹಾರದ ಸಂಪುಟ ಸಭೆಯಲ್ಲಿ ಒಟ್ಟು 17 ಪ್ರಮುಖ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಹುತಾತ್ಮರಾದ ಬಿಹಾರ ರಾಜ್ಯದ ಇಬ್ಬರು ಯೋಧರ ಅವಲಂಬಿತರಿಗೆ ರಾಜ್ಯ ಸರಕಾರಿ ಉದ್ಯೋಗ ನೀಡುವ ಕುರಿತಂತೆಯೂ ನಿರ್ಧಾರ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News