ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-06-14 18:30 GMT

ವಿದ್ಯಾರ್ಥಿವೇತನ
(ಅರ್ಹತೆ ಮತ್ತ ಆದಾಯ ಆಧಾರಿತ):
ಲಾ’ರೆಲ್ ಇಂಡಿಯಾ ಫಾರ್ ಯಂಗ್ ವುಮೆನ್ ಇನ್ ಸೈಯನ್ಸ್ ಸ್ಕಾಲರ್‌ಶಿಪ್ 2019

ವಿವರ: ಭಾರತದ ಯಾವುದೇ ಅಂಗೀಕೃತ ಸಂಸ್ಥೆಯಲ್ಲಿ, ವಿಜ್ಞಾನದ ಯಾವುದೇ ಕ್ಷೇತ್ರದಲ್ಲಿ ಪದವಿ ಅಧ್ಯಯನ ನಡೆಸಬಯಸುವ ಯುವ ಮಹಿಳೆಯರಿಗೆ ನೀಡುವ ಸ್ಕಾಲರ್‌ಶಿಪ್. ವಿಜ್ಞಾನದಲ್ಲಿ ಅಧ್ಯಯನ ನಡೆಸಲು ಹಾಗೂ ವೃತ್ತಿ ಮುಂದುವರಿಸಲು ಬಯಸುವ ಯುವ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸ್ಕಾಲರ್‌ಶಿಪ್ ನೀಡಲಾಗುತ್ತದೆ.
ಅರ್ಹತೆ: 2018-19ರ ಶೈಕ್ಷಣಿಕ ವರ್ಷದಲ್ಲಿ ಪಿಸಿಬಿ/ಪಿಸಿಎಂ/ ಪಿಸಿಎಂಬಿಯಲ್ಲಿ ಶೇ.85 ಅಂಕ ಗಳಿಸಿ ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವ 19 ವರ್ಷದ ಒಳಗಿನ ಮಹಿಳೆಯರು. ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
ನೆರವು: ನೆರವು: ಬೋಧನಾ ಶುಲ್ಕ ಹಾಗೂ ಶೈಕ್ಷಣಿಕ ವೆಚ್ಚವಾಗಿ 2,50,000 ರೂ. ಮೊತ್ತವನ್ನು ಕಂತಿನ ರೂಪದಲ್ಲಿ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 1, 2019
ಅರ್ಜಿ: ಆನ್‌ಲೈನ್ ಮೂಲಕ ಅಥವಾ ಅಂಚೆಯಲ್ಲಿ ಅರ್ಜಿ ಸಲ್ಲಿಸಬೇಕು.
L'oreal India, The scholarship cell, c/o Buddy4study, stellar IT park, c-25, Office No.8,9 &10, Tower-A, Ground floor, sector-62, Noida, Uttarpradesh-201301 India
ಜಾಲತಾಣ: http://www.b4s.in/bharati/LIF9

*************
ವಿದ್ಯಾರ್ಥಿವೇತನ
(ಅವಶ್ಯಕತೆ ಆಧಾರಿತ):
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂಬಿಎ ಸ್ಕಾಲರ್‌ಶಿಪ್ 2019-21

ವಿವರ: ದೇಶದಾದ್ಯಂತ 150 ಕಾಲೇಜುಗಳಲ್ಲಿ ಪೂರ್ಣಕಾಲಿಕ ಎಂಬಿಎ ಪದವಿಯ ಪ್ರಥಮ ವರ್ಷಕ್ಕೆ ನೋಂದಾವಣೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನೀಡುವ ಸ್ಕಾಲರ್‌ಶಿಪ್. ಬೋಧನಾ ಶುಲ್ಕ ಪಾವತಿಸಲು ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ನೀಡಲಾಗುತ್ತದೆ.
 ಅರ್ಹತೆ: ಪೂರ್ಣಕಾಲಿಕ ಎಂಬಿಎ ಪದವಿಯ ಪ್ರಥಮ ವರ್ಷಕ್ಕೆ ನೋಂದಾವಣೆ ಮಾಡಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
ನೆರವು: ಆಯ್ಕೆಯಾದವರಿಗೆ ವರ್ಷಕ್ಕೆ 1 ಲಕ್ಷ ರೂ.ಯಂತೆ 2 ವರ್ಷ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 31, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/BMS1
***************
ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
 ಇಂಡೊ-ಯುಎಸ್ ಫೆಲೋಶಿಪ್ ಫಾರ್ ವುಮೆನ್ ಇನ್ ‘ಸ್ಟೆಮ್’ 2019

ವಿವರ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ‘ಸ್ಟೆಮ್(STEM) ವಿಜ್ಞಾನ ಕ್ಷೇತ್ರಗಳಲ್ಲಿ ಉನ್ನತ ಅಧ್ಯಯನ ನಡೆಸಲು ಆಸಕ್ತರಾಗಿರುವ ಭಾರತೀಯ ಮಹಿಳೆಯರಿಂದ, ಅಮೆರಿಕದಲ್ಲಿ 3-6 ತಿಂಗಳ ಅವಧಿಯ ಫೆಲೋಶಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಜಿ ಆಹ್ವಾನಿಸಿದೆ. ಮಾಸಿಕ ಸ್ಟೈಪೆಂಡ್ ಜೊತೆಗೆ ಸಂಶೋಧನಾ ಅನುದಾನ ನೀಡಲಾಗುವುದು.
ಅರ್ಹತೆ: ಮೂಲ ವಿಜ್ಞಾನ, ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ(ಕೃಷಿ ಮತ್ತು ವೈದ್ಯಕೀಯ ವಿಜ್ಞಾನ ಸೇರಿದಂತೆ)ದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ, 27ರಿಂದ 45 ವರ್ಷದವರೆಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
 ನೆರವು: ಆಯ್ಕೆಯಾದವರಿಗೆ ತಿಂಗಳಿಗೆ 3 ಸಾವಿರ ಅಮೆರಿಕನ್ ಡಾಲರ್ ಸ್ಟೈಪೆಂಡ್, 1,000 ಡಾಲರ್ ಮೊತ್ತದವರೆಗಿನ ಆರೋಗ್ಯ ವಿಮೆ, ವಾಯುಯಾನ ಟಿಕೆಟ್ ದರಕ್ಕೆ 2,500, 1,000 ಅಮೆರಿಕನ್ ಡಾಲರ್ ಡಾಲರ್ ಮೊತ್ತದ ಸಂಶೋಧನೆ ಹಾಗೂ ಸಾದಿಲ್ವಾರು ಅನುದಾನ, ಸಮ್ಮೇಳನದಲ್ಲಿ ಭಾಗವಹಿಸಿದ ಭತ್ತೆಗಾಗಿ 1,200 ಅಮೆರಿಕನ್ ಡಾಲರ್ ಮೊತ್ತ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 17, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IFF5
**************

ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧಾರಿತ):
ಡಾ. ಬಿ.ಆರ್. ಶೆಟ್ಟಿ ಮತ್ತು ಸಿ.ಆರ್. ಶೆಟ್ಟಿ ಸ್ಕಾಲರ್‌ಶಿಪ್ ಫಾರ್ ಅಕಾಡಮಿಕ್ ಎಕ್ಸಲೆನ್ಸ್

 ವಿವರ: ಪರ್ಫ್ಯೂಷನ್ ಟೆಕ್ನಾಲಜಿ, ರೇಡಿಯೋ ಥೆರಪಿ, ನರ್ಸಿಂಗ್, ಡಯಾಲಿಸೀಸ್, ಅನಸ್ತೇಷಿಯಾ ಟೆಕ್ನಾಲಜಿ, ರೇನಲ್ ಡಯಾಲಿಸೀಸ್ ಟೆಕ್ನಾಲಜಿ, ಇಮೇಜಿಂಗ್ ಟೆಕ್ನಾಲಜಿ, ಫಿಸಿಯೋಥೆರಪಿ, ಎಎನ್‌ಎಮ್, ಎಕ್ಸ್-ರೇ ಟೆಕ್ನಾಲಜಿ ಇತ್ಯಾದಿ ವೈದ್ಯಕೀಯ ಅಧ್ಯಯನ ನಡೆಸುವವರಿಗೆ ಡಾ. ಬಿ.ಆರ್.ಶೆಟ್ಟಿ ಮತ್ತು ಸಿ.ಆರ್. ಶೆಟ್ಟಿ ಪ್ರತಿಷ್ಠಾನ ನೀಡುವ ಸ್ಕಾಲರ್‌ಶಿಪ್. ಪ್ರಥಮ ಮತ್ತು ದ್ವಿತೀಯ ವರ್ಷದ ಬಿಎಸ್ಸಿ, ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹತೆ: ಕರ್ನಾಟಕದ ಉಡುಪಿ ನಿವಾಸಿಗಳಾಗಿರಬೇಕು, ಪಿಯುಸಿಯಲ್ಲಿ ಕನಿಷ್ಠ ಶೇ. 60 ಅಂಕ ಗಳಿಸಿರಬೇಕು ಮತ್ತು ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂ.ಗಿಂತ ಹೆಚ್ಚಾಗಿರಬಾರದು. ಅಂಗವೈಕಲ್ಯ ಹೊಂದಿರುವವರು, ಪೋಷಕರಲ್ಲಿ ಒಬ್ಬರು ಮಾತ್ರ ಇರುವವರು, ಬೀಡಿ ಕಾರ್ಮಿಕರು, ಕುಟುಂಬದಲ್ಲಿ ಕ್ಯಾನ್ಸರ್, ಎಚ್‌ಐವಿ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಮೊದಲ ಆದ್ಯತೆ ನೀಡಲಾಗುವುದು.
ನೆರವು: ಆಯ್ಕೆಯಾದವರಿಗೆ ವರ್ಷಕ್ಕೆ 60 ಸಾವಿರ ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 30, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/DB1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News