ವನಿತೆಯರ ವಿಶ್ವಕಪ್‌: ಆಸ್ಟ್ರೇಲಿಯಕ್ಕೆ 3-2 ಜಯ

Update: 2019-06-15 04:18 GMT

 ಮೊಂಟ್‌ಫೆಲ್ಲಿಯರ್, ಜೂ.14: ವನಿತೆಯರ ವಿಶ್ವಕಪ್‌ನಲ್ಲಿ ಬ್ರೆಝೀಲ್ ವಿರುದ್ಧ ಆಸ್ಟ್ರೇಲಿಯ 3-2 ಅಂತರದಲ್ಲಿ ಜಯ ಗಳಿಸಿದೆ. ದ್ವಿತೀಯಾರ್ಧದಲ್ಲಿ ದಾಖಲಾದ ಎರಡು ಗೋಲುಗಳು ಮತ್ತು ಎದುರಾಳಿ ತಂಡದ ಆಟಗಾರ್ತಿಯಿಂದ ಸಿಕ್ಕಿದ ಸ್ವಯಂಗೋಲು ಆಸ್ಟ್ರೇಲಿಯದ ಗೆಲುವಿಗೆ ನೆರವಾಗಿದೆ.

ಬ್ರೆಝಿಲ್‌ನ ಮಾರ್ಟಾ (27ನೇ ನಿಮಿಷ), ಕ್ರಿಸ್ತಿಯಾನೆ (38ನೇ ) ಗೋಲು ಜಮೆ ಮಾಡಿ ಪ್ರಥಮಾರ್ಧದಲ್ಲೇ ಬ್ರೆಝಿಲ್‌ಗೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ ಬಳಿಕ ಬ್ರೆಝಿಲ್‌ನ ಗೆಲುವಿನ ಆಸೆಯನ್ನು ಆಸ್ಟ್ರೇಲಿಯ ಮಣ್ಣುಗೂಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News