ಯಲ್ಲಾಪುರ: ಬೈಕ್ ಅಪಘಾತಕ್ಕೆ ಮಹಿಳೆ ಬಲಿ

Update: 2019-06-15 13:27 GMT

ಯಲ್ಲಾಪುರ, ಜೂ.15: ಚಲಿಸುತ್ತಿದ್ದ ಬೈಕ್ ಗೆ ನಾಯಿ ಅಡ್ಡಬಂದಾಗ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದ ಪರಿಣಾಮ ಬೈಕ್ ಹಿಂದೆ ಕುಳಿತ ಮಹಿಳೆ ಸಾವನ್ನಪ್ಪಿದ ಘಟನೆ ಯಲ್ಲಾಪುರ ತಾಲೂಕಿನ ಮುಂಡಗೋಡ-ಯಲ್ಲಾಪುರ ರಸ್ತೆಯ ಹುಣೆಶೇಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ

ಮೃತ ಮಹಿಳೆಯನ್ನು ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ರೇಜಿನಾ ಫ್ರಾನ್ಸೀಸ್ ಸಿದ್ಧಿ(41) ಎಂದು ಗುರುತಿಸಲಾಗಿದೆ. ಬೈಕ್ ಸವಾರ ರೋಷನ್ ಫ್ರಾನ್ಸೀಸ್ ಗಾಯಗೊಂಡಿದ್ದಾರೆ. ಗಾಯಾಳುವನ್ನು ಯಲ್ಲಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನಾ ಸ್ಥಳಕ್ಕೆ ಪೊಲೀಸ್ ನಿರೀಕ್ಷಕ ಮಂಜುನಾಥ ನಾಯ್ಕ, ಉಪನಿರೀಕ್ಷಕ ಸುಂದರ ಎಂ., ಪ್ರೋಬಶನರಿ ಪಿಎಸ್ಐ ವಿಜಯಲಕ್ಷ್ಮೀ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News