ಆಸೀಸ್ ಮಾರಕ ದಾಳಿಗೆ ತತ್ತರಿಸಿದ ಲಂಕಾ: 87 ರನ್ ಗಳ ಸೋಲು

Update: 2019-06-15 17:15 GMT

ಲಂಡನ್, ಜೂ.15: ಆರಂಭಿಕ ಆಟಗಾರರಾದ ಕರುಣರತ್ನೆ ಹಾಗೂ ಕುಸಲ್ ಪೆರೇರ ಅವರ ಭರ್ಜರಿ ಆರಂಭದ ಹೊರತಾಗಿಯೂ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ವಿಶ್ವಕಪ್‌ನ 20ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ 87 ರನ್‌ಗಳಿಂದ ಸೋಲುಂಡಿದೆ.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ 7 ವಿಕೆಟ್‌ಗಳ ನಷ್ಟಕ್ಕೆ 334 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 45.5 ಓವರ್‌ಗಳಲ್ಲಿ 247 ರನ್ ಗಳಿಗೆ ಆಲೌಟ್ ಆಯಿತು.

ಇನಿಂಗ್ಸ್ ಆರಂಭಿಸಿದ ನಾಯಕ ಕರುಣರತ್ನೆ(97, 108 ಎಸೆತ, 9 ಬೌಂಡರಿ) ಹಾಗೂ ಕುಸಲ್ ಪೆರೇರ(52, 36 ಎಸೆತ, 5 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್‌ಗೆ 113 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಕುಶಾಲ್ ಮೆಂಡಿಸ್(30, 37 ಎಸೆತ)ಒಂದಷ್ಟು ಹೋರಾಟ ನೀಡಿದರೆ, ಉಳಿದ ಆಟಗಾರರು ಬೇಗನೆ ವಿಕೆಟ್ ಕೈಚೆಲ್ಲಿದರು.

ಆಸೀಸ್ ಪರ ಸ್ಟಾರ್ಕ್ (55-4) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News