ಹನೂರು: ಭಾರೀ ಗಾಳಿಗೆ ಉರುಳಿ ಬಿದ್ದ ಮರ; ರಸ್ತೆ ಸಂಚಾರಕ್ಕೆ ಅಡಚಣೆ

Update: 2019-06-16 18:58 GMT

ಹನೂರು, ಜೂ.16: ತಾಲೂಕಿನ ಲೊಕ್ಕನಹಳ್ಳಿಯ ಗ್ರಾಮದ ಹೊರವಲಯದ ತಮಿಳುನಾಡು ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ಬೀಸಿದ ಭಾರಿ ಗಾಳಿಗೆ ಬೃಹತ್ ಮರವೊಂದು ಬೇರು ಸಮೇತ ಧರೆಗುಳಿದ ಪರಿಣಾಮ ಹಲವು ತಾಸುಗಳ ಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು.

ತಕ್ಷಣವೇ ಸ್ಥಳೀಯ ಯುವಕರು ಮತ್ತು ವಾಹನ ಸವಾರರು ಮುತುವರ್ಜಿ ವಹಿಸಿ ರಸ್ತೆಗೆ ಬಿದ್ದ ಮರದ ದಿಣ್ಣೆಗಳನ್ನು ಪಕ್ಕಕ್ಕೆ ಸರಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

ಸಾರ್ವಜನಿಕರ ಆತಂಕ: ಭಾರೀ ಗಾಳಿಗೆ ಬೃಹತ್ ಆಕಾರದ ಮರ ಬಿದ್ದಿದ್ದಲ್ಲದೇ, ಹಲವೆಡೆ ಮರಗಳು ಒಣಗಿ ಬೀಳುವ ಸ್ಥಿತಿಯಲ್ಲಿದೆ. ಹೀಗಾಗಿ ಈ ಭಾಗದ ಸಾರ್ವಜನಿಕರು ಪ್ರಯಾಣಿಕರು ವಾಹನ ಸವಾರರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ ಹಾಗೂ ರಸ್ತೆಗೆ ಬಾಗಿರುವ ಒಣಗಿರುವ ಮರಗಳು ಮೈಮೇಲೆ ಬಿದ್ದರೆ ಹೇಗೆ ಎಂಬ ಆತಂಕವು ಜನತೆಗೆ ಕಾಡಲಾರಂಬಿಸಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News