ದಾವಣಗೆರೆಯಲ್ಲಿ ವೈದ್ಯರ ಮುಷ್ಕರ: ಓಪಿಡಿ ಸೇವೆ ಸ್ಥಗಿತ, ರೋಗಿಗಳ ಪರದಾಟ

Update: 2019-06-17 18:51 GMT

ದಾವಣಗೆರೆ, ಜೂ.17: ಪಶ್ಚಿಮ ಬಂಗಾಳದಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಶಿಕ್ಷೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಭಾರತೀಯ ವೈದ್ಯರ ಸಂಘ, ಮೆಡಿಕಲ್ ಸರ್ವೀಸ್ ಸೆಂಟರ್, ಕಿರಿಯ ವೈದ್ಯರ ಸಂಘ, ಜೆಜೆಎಂ ವೈದ್ಯಕೀಯ ವಿದ್ಯಾರ್ಥಿಗಳ ಸಂಘ ನೇತೃತ್ವದಲ್ಲಿ ಹಿರಿಯ-ಕಿರಿಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿ ಸೋಮವಾರ ಪ್ರತಿಭಟಿಸಿದರು.

ನಗರದ ಬಾಪೂಜಿ ಆಸ್ಪತ್ರೆ ಬಳಿ ಬೆಳಿಗ್ಗೆ 6ರಿಂದಲೇ ಓಪಿಡಿ ಸೇವೆಯನ್ನು ಸ್ಥಗಿತಗೊಳಿಸಿದ ಹಿರಿಯ-ಕಿರಿಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂದ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳನ್ನು ಖಂಡಿಸಿ, ವೈದ್ಯರ ರಕ್ಷಣೆಹಗೆ ಕಠಿಣ ಕಾನೂನು ಜಾರಿಗೆ ಒತ್ತಾಯಿಸಿ ಘೋಷಣೆ ಕೂಗುತ್ತಾ ಗಾಂಧಿ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಬಂದರು.

ಈ ಸಂದರ್ಭ ಮಾತನಾಡಿದ ಐಎಂಎ ಜಿಲ್ಲಾಧ್ಯಕ್ಷ ಗಣೇಶ ಸಿ.ಇಡಗುಂಜಿ, ಕೊಲ್ಕತ್ತಾದ ಎನ್‍ಆರ್‍ಎಸ್ ವೈದ್ಯಕೀಯ ಸಂಸ್ಥೆಯ ಕಿರಿಯ ವೈದ್ಯ ಡಾ.ಪರಿಭಾ ಮುಖರ್ಜಿ ಸೇರಿದಂತೆ ಹಿರಿ-ಕಿರಿಯ ವೈದ್ಯರ ಮೇಲೆ ರೋಗಿ ಸಂಬಂಧಿಗಳು ಕಳೆದ ದಿ.10ರಂದು ಮಾರಣಾಂತಿಕ ಹಲ್ಲೆ ಮಾಡಿದ್ದು, ಈ ಘಟನೆ ಹಿನ್ನೆಲೆಯಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳ ರಕ್ಷಣೆಗೆ ಕಠಿಣ ಕಾನೂನು ಜಾರಿಗೆ ಒತ್ತಾಯಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಐಎಂಎ ಕರೆಯ ಮೇರೆಗೆ ಇಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದೇವೆ ಎಂದರು. 

ಮಕ್ಕಳ ಆರೋಗ್ಯ ರಾಷ್ಟ್ರೀಯ ಸಂಚಾಲಕ, ಎಸ್ಸೆಸ್ ಹೈಟೆಕ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಎನ್.ಕೆ. ಕಾಳಪ್ಪನವರ್, ಎಸ್ಸೆಸ್ ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗ ಮುಖ್ಯಸ್ಥೆ, ಹಿರಿಯ ಲೇಖಕಿ ಡಾ.ಶಶಿಕಲಾ ಪಿ.ಕೃಷ್ಣಮೂರ್ತಿ, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ.ಮುರುಗೇಶ, ಡಾ.ಬಿ.ಎಸ್. ನಾಗಪ್ರಕಾಶ, ಡಾ.ಎಲ್.ಕೃಷ್ಣಮೂರ್ತಿ, ಡಾ.ಎ.ಎಂ.ಶಿವಕುಮಾರ, ಡಾ.ಎ.ಸಿ.ಬಸವರಾಜ, ಡಾ. ನಾಗಪ್ಪ ಕಡ್ಲಿ, ಡಾ.ಮಾವಿನತೋಪು, ಡಾ.ರವಿ, ಡಾ.ಜಗನ್ನಾಥ್, ಡಾ.ಶಾಂತಲಾ ಅರುಣಕುಮಾರ, ಡಾ.ರಶ್ಮಿ ಮರಳಿಹಳ್ಳಿ, ಡಾ.ಜಿ.ಯು.ಕವಿತಾ, ಡಾ.ಪ್ರೇಮಾ ಪ್ರಭುದೇವ್, ಡಾ. ರಶ್ಮಿ ಹೆಗಡೆ, ಡಾ. ಲತಾ, ಡಾಮಹೇಶ, ಡಾ.ಶಾಂತಕುಮಾರ, ಡಾ.ಶಿವಮೂರ್ತಿ, ಡಾ.ಶಿವಕುಮಾರ, ಡಾ.ಮಾರುತಿ ಪ್ರಸಾದ್, ಡಾ.ನವೀನ್ ನಾಡಿಗ್, ಡಾ.ಅಶೋಕ, ಡಾ.ಮಾಲತೇಶ, ಡಾ.ಸತ್ಯನಾರಾಯಣ, ಡಾ. ಸಂಗಮೇಶ, ಡಾ.ಶಿವಮೂರ್ತಿ, ಡಾ.ಪ್ರವೀಣ, ಡಾ.ಮಲ್ಲೇಶ, ಡಾ.ಸಿದ್ದೇಶ್, ಡಾ.ಅನಿತಾ, ಡಾ. ಶ್ರೇಯಾ, ಡಾ.ವೀಣಾ, ಡಾ.ಅದಿತಿ, ಡಾ.ಶ್ರೀನಿವಾಸ, ಡಾ.ನಿಖಿಲ್, ಡಾ.ವಿನಯ್ ಸ್ವಾಮಿ ಮುಷ್ಕರದಲ್ಲಿದ್ದರು. 

ಓಪಿಡಿ ಸೇವೆ ಸ್ಥಗಿತ, ರೋಗಿಗಳ ಪರದಾಟ
ಭಾರತೀಯ ವೈದ್ಯರ ಸಂಘದ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನಗರ, ಜಿಲ್ಲಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಸ್ಥಗಿತಗೊಂಡಿದ್ದರಿಂದ ರೋಗಿಗಳು ಪರದಾಡಬೇಕಾಯಿತು. ವೈದ್ಯರ ಮುಷ್ಕರದಿಂದಾಗಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ಓಪಿಡಿಗಳು ಬಂದ್ ಆಗಿದ್ದು, ವೈದ್ಯರಿಲ್ಲದೇ ಆಸ್ಪತ್ರೆಗಳು ಬಿಕೋ ಎನ್ನುತ್ತಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News