ಲೋಕಸಭಾ ಸ್ಪೀಕರ್ ಹುದ್ದೆಗೆ ರಾಜಸ್ಥಾನದ ಸಂಸದ ಓಂ ಬಿರ್ಲಾ

Update: 2019-06-18 05:54 GMT

 ಹೊಸದಿಲ್ಲಿ, ಜೂ.18: ರಾಜಸ್ಥಾನದ ಕೋಟಾ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಚುನಾಯಿತರಾಗಿರುವ ಓಂ ಬಿರ್ಲಾ ಲೋಕಸಭೆಯ ನೂತನ ಸ್ಪೀಕರ್ ಹುದ್ದೆ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

17ನೇ ಲೋಕಸಭಾ ಕಲಾಪ ಸೋಮವಾರ ಆರಂಭವಾಗಿದ್ದು, ಎರಡನೇ ದಿನವಾದ ಮಂಗಳವಾರ ಬಿರ್ಲಾರನ್ನು ನೂತನ ಸ್ಪೀಕರ್ ಆಗಿ ತನ್ನ ಸ್ಥಾನ ಅಲಂಕರಿಸುವ ನಿರೀಕ್ಷೆಯಿದೆ.

 ‘‘ಇದು ನಮ್ಮ ಕುಟುಂಬಕ್ಕೆ ಹೆಮ್ಮೆಯ ಕ್ಷಣ. ನನ್ನ ಪತಿಯನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಿರುವ ಸಚಿವ ಸಂಪುಟಕ್ಕೆ ಕೃತಜ್ಞತೆ ಸಲ್ಲಿಸುವೆ’’ ಎಂದು ಓಂ ಬಿರ್ಲಾರ ಪತ್ನಿ ಅಮಿತಾ ಬಿರ್ಲಾ ಹೇಳಿದ್ದಾರೆ.

 ಈ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಕೋಟ-ಬಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಓಂ ಬಿರ್ಲಾ ಕಾಂಗ್ರೆಸ್‌ನ ರಾಮನಾರಾಯಣ ಮೀನಾರನ್ನು 2.5 ಲಕ್ಷ ಮತಗಳ ಅಂತರದಿಂದ ಮಣಿಸಿದ್ದರು. ಓಂ ಬಿರ್ಲಾ ಅವರು ಸುಮಿತ್ರಾ ಮಹಾಜನ್‌ರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಲಿದ್ದಾರೆ. ಮಹಾಜನ್ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಸ್ಪಷ್ಟ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಓಂ ಬಿರ್ಲಾ ಸುಲಭವಾಗಿ ಸ್ಪೀಕರ್ ಹುದ್ದೆಗೇರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News