ರಾಮನಗರ: ಎಲ್ಲ ತಾಲೂಕುಗಳಿಗೆ ಕುಡಿಯುವ ನೀರು ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಸಿಎಂ

Update: 2019-06-18 08:38 GMT

ರಾಮನಗರ, ಜೂ.18: ರಾಮನಗರ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಸುಮಾರು 540 ಕೋಟಿ ರೂ. ವೆಚ್ಚದ ಯೋಜನೆಗೆ  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಕಣ್ವಾ ಜಲಾಶಯ ಬಳಿ ಶಿಲಾನ್ಯಾಸ ನೆರವೇರಿಸಿದರು.

ಚನ್ನಪಟ್ಟಣ, ಮಾಗಡಿ, ರಾಮನಗರ, ಕನಕಪುರ ತಾಲೂಕಿನ ಎಲ್ಲ ಹಳ್ಳಿ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸತ್ತೇಗಾಲ ಸಮೀಪದಲ್ಲಿ ಕಾವೇರಿ ನದಿಯಿಂದ ಇಗ್ಗಲೂರು ಎಚ್.ಡಿ.ದೇವೇಗೌಡ ಬ್ಯಾರೆಜ್ ಗೆ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ.
ಕಾವೇರಿ ನದಿಯಿಂದ 210 ಕ್ಯೂಸೆಕ್  ನೀರನ್ನು ಈ ಮಹಾತ್ವಾಂಕ್ಷಿ ಯೋಜನೆಯಡಿ ಪೈಪ್ ಗಳ ಮೂಲಕ ಇಗ್ಗಲೂರು, ಕಣ್ವಾ, ವೈಜಿ ಗುಡ್ಡ, ಮಂಚನಬೆಲೆ  ಜಲಾಶಯಗಳಿಗೆ ತುಂಬಿಸಲಾಗುವುದು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರ.ಮಹೇಶ್ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News